ಹೊಸನಗರ ತೀರ್ಥಳ್ಳಿ ಹಾಗೂ ಉಡುಪಿ ಜಿಲ್ಲೆಯ 27ನೇ ವರ್ಷದ ಭಜನಾ ಕಮ್ಮಟದ ಶಿಬಿರಾರ್ಥಿಗಳಿಂದ ಪೂಜ್ಯ ಖಾವಂದರಿಗೆ ಹಾಗೂ ಮಾತಾಶ್ರೀ ಹೇಮಾವತಿ ಅಮ್ಮನವರಿಗೆ ಹಾಗೂ ರಾಜ್ಯ ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾದಂತ ಶ್ರೀಯುತ ವೀರು ಶೆಟ್ಟಿ ಅವರಿಗೆ ಸಂಚಾಲಕರಾದಂತಹ ಜಿ ಸುಬ್ರಹ್ಮಣ್ಯ ಪ್ರಸಾದ್ ರವರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಭಜನಾ ಪರಿಷತ್ ನ ಉಪಾಧ್ಯಕ್ಷರಾದಂತ ರಾಜೇಂದ್ರಕುಮಾರ್ ಬಸ್ರೂರು ಜಿಲ್ಲಾ ಸಮನ್ವಯ ಅಧಿಕಾರಿ ರವೀಂದ್ರ ಎಸ್ ಬಸ್ರೂರು ಹಾಗೂ 27ನೇ ವರ್ಷದ ಭಜನಾ ಕಮ್ಮಟದ ತೀರ್ಥಹಳ್ಳಿ ಹೊಸನಗರ, ಉಡುಪಿ,ಶಿವಮೊಗ್ಗ,ಸೊರಬ,ಭಾಗದ ಶಿಬಿರಾರ್ತಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜ್ಯ ಭಜನಾ ಪರಿಷತ್ತಿನ ಸಂಚಾಲಕರಾದಂತಹ ಜಿ.ಸುಬ್ರಹ್ಮಣ್ಯ ಪ್ರಸಾದ್ ರವರು ಬೈಂದೂರು ತಾಲೂಕು ಪರಿಷತ್ತಿನ ವತಿಯಿಂದ ಬಿಡುಗಡೆಗೊಳಿಸಲಾದಂತಹ ಭಜನಾ ಯಜ್ಞ ದೀಪ್ತಿ ಪುಸ್ತಕವನ್ನು ರಚಿಸುವಲ್ಲಿ ಶ್ರಮಿಸಿದಂತಹ ಊರಿನ ಹಿರಿಯ ಭಜಕರಿಗೆ ಗೌರವವನ್ನು ಸಮರ್ಪಿಸಿದರು ಹಾಗೂ ಬೈಂದೂರು ತಾಲೂಕು ಪರಿಷತ್ತಿನ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು .

