ಬಹುಮುಖ ಪ್ರತಿಭೆ ಯಕ್ಷಗಾನ ಕಲಾವಿದೆ ಅಪೇಕ್ಷ ಕೆ.ಯು. ರವರಿಗೆ ಸನ್ಮಾನ

0
85

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ನಗರದ ಸಿದ್ದವೀರಪ್ಪ ಬಡಾವಣೆಯ ಶಾಖೆ ಮತ್ತು ಎಂ.ಸಿ.ಸಿ. `ಎ’ ಬ್ಲಾಕ್ ಶಾಖೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ದಾವಣಗೆರೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಸಮಾರಂಭದಲ್ಲಿ ಕಾರ್ಯಕ್ರಮ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಬಹುಮುಖ ಪ್ರತಿಭೆ ಯಕ್ಷಗಾನ ಕಲಾವಿದೆ ಅಪೇಕ್ಷ ಕೆ.ಯು. ಅವಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರ, ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್, ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಕಲಾಕುಂಚ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಅಡಿಗ, ಶ್ರೀಮತಿ ಶಿಲ್ಪಾ ಉಮೇಶ್ ಹಾಗೂ ಮಕ್ಕಳು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here