ತುಳು ಅಕಾಡೆಮಿಯ ಪುಸ್ತಕಗಳಿಗೆ ಶೇ.50ರ ರಿಯಾಯಿತಿಯಲ್ಲಿ ಮಾರಾಟ

0
4

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರಕಟಿಸಿರುವ ತುಳು ಪುಸ್ತಕಗಳನ್ನು ಶೇ.50 ರ ರಿಯಾಯಿತಿಯ ದರದಲ್ಲಿ ಮಾರಾಟ ಮಾಡುವ ಸ್ವಾತಂತ್ಯೋತ್ಸವ ತುಳು ಪುಸ್ತಕೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಸ್ವಾತಂತ್ಯೋತ್ಸವದ ತುಳು ಪುಸ್ತಕೋತ್ಸವನ್ನು ಶುಕ್ರವಾರದಂದು ತುಳುಭವನದ ಅಕಾಡೆಮಿಯ ಗ್ರಂಥಾಲಯದಲ್ಲಿ ದೀಪ ಬೆಳಗಿಸುವ ಮೂಲಕ ಅಕಾಡೆಮಿಯ ಸದಸ್ಯರಾದ ಕುಂಬ್ರ ದರ‍್ಗಾ ಪ್ರಸಾದ್ ರೈ ಅವರು ಉದ್ಘಾಟಿಸಿದರು.

ಈ ಸಂದರ‍್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ , ರಿಜಿಸ್ಟ್ರಾರ್ ಪರ‍್ಣಿಮಾ, ಸದಸ್ಯರಾದ ಬೂಬ ಪೂಜಾರಿ ಮಳಲಿ, ಅಕ್ಷಯ ಆರ್ ಶೆಟ್ಟಿ, ಸಂತೋಷ್ ಶೆಟ್ಟಿ ಹಿರಿಯಡ್ಕ ಹಾಗೂ ಅಕಾಡೆಮಿಯ ಮಾಜಿ ಸದಸ್ಯರಾದ ಬೆನೆಟ್ ಜಿ ಅಮ್ಮನ್ನ ಉಪಸ್ಥಿತರಿದ್ದರು.

ಸ್ವಾತಂತ್ಯೋತ್ಸವದ ಪ್ರಯುಕ್ತ ನಡೆಯುವ ಈ ರಿಯಾಯಿತಿ ದರದ ಮಾರಾಟವು ಆಗಸ್ಟ್ 31 ರ ತನಕ ನಡೆಯಲಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.