ಆ.15ರಂದು ತುಳುಕೂಟ (ರಿ.) ಪುಣೆಯಲ್ಲಿ 27ನೇ ವಾರ್ಷಿಕೋತ್ಸವ

0
14

ಪುಣೆ : ತುಳುಕೂಟ (ರಿ) ಪುಣೆ 27ನೇ ವಾರ್ಷಿಕೋತ್ಸವ ಸಮಾರಂಭವು 15-08-2026ನೇ ಶನಿವಾರ ಮಧ್ಯಾಹ್ನ 2 ಗಂಟೆಯಿಂದ “ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರಭವನ” ಬಾಣೆರ್ ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಕಾರ್ಯಕ್ರಮದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸ್ವರಮಾಧುರ್ಯ ತಂಡ, ಪುಣೆ ಇವರಿಂದ “ರಸಮಂಜರಿ” ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಬಿರುದು ಪ್ರದಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ನಡೆಯಲಿದೆ.

ಮನೋರಂಜನೆಯ ಅಂಗವಾಗಿ ಪುಷ್ಪರಾಜ್ ಬೊಳ್ಳಾರ್ ಸಾರಥ್ಯದ ಕುಡ್ಲ ಕುಸಾಲ್ ತಂಡದವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ರಾಮ ಕುಂಜ ಅಭಿನಯದ “ತೆಲಿಕೆದ ಕಮ್ಮೆನ” ತುಳು ಹಾಸ್ಯಾಭಿನಯ ನಡೆಯಲಿದೆ. ಬಳಿಕ ಭೋಜನದ ವ್ಯವಸ್ಥೆ ಇರಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿನೇಶ್‌ ಶೆಟ್ಟಿ ಕಳತ್ತೂರು ಅಶ್ವಥ್ಹಗುತ್ತು (ಅಧ್ಯಕ್ಷರು ತುಳುಕೂಟ (ರಿ.) ಪುಣೆ) ವಹಿಸಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರೇಶ್‌ ಶೆಟ್ಟಿ ಗುರ್ಮೆ (ಶಾಸಕರು,ಕಾಪು ವಿಧಾನ ಸಭಾ ಕ್ಷೇತ್ರ) ಹಾಗೂ ಇನಾಯತ್‌ ಆಲಿ (ಪ್ರಧಾನ ಕಾರ್ಯದರ್ಶಿ ,ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ) (ಕೆಪಿಸಿಸಿ) ಭಾಗವಹಿಸಲಿದ್ದಾರೆ.

ಡಾ. ಕೆ. ಪ್ರಕಾಶ್ ಶೆಟ್ಟಿ (ಸಿ.ಎಂ.ಡಿ., ಎಂ.ಆರ್.ಜಿ. ಗ್ರೂಪ್, ಬೆಂಗಳೂರು) ಇವರಿಗೆ ವಿಶೇಷ ಗೌರವ ಬಿರುದು ಪ್ರಧಾನ ಮಾಡಲಾಗುವುದು. ಈ ಸಂದರ್ಭದಲ್ಲಿ ಕೆ.ಡಿ. ಶೆಟ್ಟಿ, ಛೇರ್ಮನ್, ಭವಾನಿ ಗ್ರೂಪ್ ಅವರಿಗೆ “ತೌಳವ ಛತ್ರಪತಿ” ಗೌರವ ಬಿರುದು ಪ್ರದಾನ ಮಾಡಲಾಗುತ್ತದೆ.

ಮುಖ್ಯ ಅತಿಥಿಗಳಾಗಿ ಜಯಶಂಕರ ವಿಶ್ವನಾಥನ್ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಯುನಿವರ್ಸಲ್ ಎಲೆಕ್ಟ್ರೋ ಇಂಜಿನಿಯರಿಂಗ್, ಬಹರೈನ್), ಪದ್ಮರಾಜ್ ಆರ್. ಪೂಜಾರಿ (ಅಡ್ವಕೇಟ್ ಹಾಗೂ ಕೋಶಾಧಿಕಾರಿ, ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಕುದ್ರೋಳಿ ಮಂಗಳೂರು ), ಶಮ್ಮಿ ಅಜಿತ್ ಹೆಗ್ಡೆ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ, ಬಂಟರ ಸಂಘ, ಪುಣೆ), ಭಾಗವಹಿಸಲಿರುವರು. ಮಹಾಬಲ ಪೂಜಾರಿ ಮಾಳ (ಸಾಹಿತಿ , ಭಗವದ್ಗೀತೆಯ ತುಳು ಅನುವಾದಕರು), ಇವರನ್ನು ಸನ್ಮಾನಿಸಲಾಗುವುದು.

.