ಕಲ್ಯಾಣ್: ತುಳುನಾಡ ತುಳುವೆರ್ , ಕಲ್ಯಾಣ್ ಮಹಿಳಾ ವಿಭಾಗದ ಸದಸ್ಯೆಯರಿಂದ ನವರಾತ್ರಿ ಅಂಗವಾಗಿ ವಿವಿದೆಡೆಗಳಲ್ಲಿ ಭಜನಾ ಕಾರ್ಯಕ್ರಮ ಒಂಭತ್ತು ದಿನಗಳ ಕಾಲ ನಡೆಯಿತು . ಒಂಭತ್ತು ದಿನಗಳಲ್ಲಿ ಒಂಭತ್ತು ಸೀರೆಗಳನ್ನು ತೊಟ್ಟು ಸಂಸ್ಥೆಯ ಸದಸ್ಯೆಯರ ಹಾಗೂ ಆಮಂತ್ರಿತ ಮಂದಿರಗಳಲ್ಲಿ ಭಜನಾ ಕಾರ್ಯಕ್ರಮ ನೀಡಿ ಭಕ್ತಾಧಿಗಳನ್ನು ರಂಜಿಸಿದರು. ಭಜನಾ ಕಾರ್ಯಕ್ರಮವು ಸಂಸ್ಥೆಯ ಸಂಸ್ಥಾಪಕ ಅಶೋಕ್ ಎಲ್ ಪೂಜಾರಿ ಉಲ್ಯ ಗುತ್ತು ಪಂಜ – ಕೊಯಿಕುಡೆ ಇವರ ಉಪಸ್ಥಿತಿಯಲ್ಲಿ ನಡೆಯಿತು.

ತುಳುನಾಡ ತುಳುವೆರ್, ಕಲ್ಯಾಣ್ ಇದರ ಕಚೇರಿಯಲ್ಲಿ ಭಜನಾ ಕಾರ್ಯಕ್ರಮ ಬಹಳ ವಿಜೃಂಭಣೆಯಲ್ಲಿ ನಡೆಯಿತು. ವಿವಿದೆಡೆ ಭಜನಾ ಕಾರ್ಯಕ್ರಮದಲ್ಲಿ ರೇಖಾ ಶೆಟ್ಟಿ , ಸುಮಿತ್ರ ಪೂಜಾರಿ, ಉಮಾ ಶೆಟ್ಟಿ , ಪ್ರಭಾವತಿ ಸುವರ್ಣ, ಅಂಜನಾ ಪೂಜಾರಿ, ಭವಾನಿ ಪೂಜಾರಿ, ವಿಜಯ ಕೋಟಿಯನ್, ಶ್ರೀಮತಿ ಕೋಟಿಯನ್ , ಸುಮಿತಾ ಶೆಟ್ಟಿ , ಪದ್ಮಿನಿ ಕೋಟಿಯನ್, ಸುಮತಿ ಕರ್ಕೇರ, ಪ್ರಜ್ಞಾ ಪೂಜಾರಿ, ಯಮುನ ಸುವರ್ಣ, ಶ್ರಿಯಲ ಶೇರಿಗಾರ್, ಶಿಲ್ಪಿ ಕರ್ಕೇರ, ನಿಶಾ ಕೋಟಿಯನ್ , ಅರ್ಚನ ಕೋಟಿಯನ್ ಜಯಶ್ರಿ ಪೂಜಾರಿ, ಶಶಿ ಜೆ. ಪೂಜಾರಿ , ಸಂಗೀತ , ಪುಷ್ಪ , ಶಶಿ ಎಸ್ . ಪೂಜಾರಿ, ತಾರಾ ಬಿಲ್ಲವ, ಬೀನಾ ಸಾಲಿಯಾನ್ , ರಾಮಚಂದ್ರ ಸುವರ್ಣ, ಪ್ರಮೋದ್ ಸಾಲಿಯಾನ್, ಗಣೇಶ್ ಸುವರ್ಣ, ಗಂಗಾಧರ ಶೆಟ್ಟಿ , ಅಶೋಕ್ ಕೋಟಿಯನ್, ಕೃಷ್ಣ ಶೆಟ್ಟಿ , ರವಿ ಶೆಟ್ಟಿ , ಜಯ ಕರ್ಕೇರ ಸಿದ್ಧಿ ಕೋಟಿಯನ್ ಮತ್ತು ಖುಷಿ ಸಾಲಿಯಾನ್ ಪಾಲ್ಗೊಂಡಿದ್ದರು.

