ಮಾದಕ ವಸ್ತು ಸೇವನೆ ಆರೋಪ – ಇಬ್ಬರ ಬಂಧನ

0
26

ಮಂಗಳೂರು : ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ನಗರದ ವಿವಿಧೆಡೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಬಾವುಟಗುಡ್ಡೆ ಬಳಿ ವಳಚ್ಚಿಲ್ ನಿವಾಸಿ ಹನೀಫ್ (23) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದೇ ವೇಳೆ ನಗರದ ಗುಜ್ಜರಕೆರೆ ಬಳಿ ಮಾದಕ ವಸ್ತು ಸೇವಿಸಿದ್ದ ಆರೋಪದಡಿ ಕಾಸರಗೋಡು ಜಿಲ್ಲೆಯ ಬೇಕೂರು ನಿವಾಸಿ ಝನುಲ್ ಅಬಿದೀನ್ (25) ಎಂಬಾತನನ್ನು ಪಾಂಡೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.