
ಮಂಗಳೂರು : ರೋಟರಿ ಮಂಗಳೂರು ನಾರ್ತ್ ಕ್ಲಬ್ (R.I. 3181) ವತಿಯಿಂದ ಸೆ.22ರಂದು ಸಂಜೆ 7 ಗಂಟೆಗೆ ಆಯೋಜಿಸಿದ್ದ ‘ಹಳ್ಳಿ ಶಿಕ್ಷಕ’ ನಾಟಕವು ರೋಟೇರಿಯನ್ ಗಳ ಅಭಿನಯದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಈ ದಿನದ ಡಿನ್ನರ್ ಮೀಟಿಂಗ್ ಅನ್ನು ರೊ. ಅಜಿತ್ ರಾವ್ ಮತ್ತು ರೊ. ಆರ್.ಎಂ. ಗೊಗೆರಿ ಅವರು ಆಯೋಜಿಸಿದ್ದರು.
‘ಹಳ್ಳಿ ಶಿಕ್ಷಕ’ ಕೇವಲ ನಾಟಕವಲ್ಲ, ಇಂದಿನ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ. ಶಿಕ್ಷಣದ ಮಹತ್ವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ರಂಗಭೂಮಿ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಯಿತು.

ಈ ನಾಟಕದ ಪಾತ್ರವರ್ಗದಲ್ಲಿ
ಅಕೃತಿ ಭಟ್, ಅನಿತಾ ಶೆಣೈ, ಮುಬೀನಾ ಪರವೀನ್ ತಾಜ್, ವಿಗ್ನೇಶ ಭಿಡೆ, ರೊ. ಅಜಿತ್, ವಿಶ್ವನಾಥ್ ಶೆಟ್ಟಿ , ರೇಖಾ ಸುದೇಶ್ ರಾವ್, *ಕಸ್ತೂರಿ, *ಆಕಾಶವಾಣಿ ಉದ್ಘೋ ಷಕಿ ಸುಲೋಚನಾ ನವೀನ್ * ಅವರು ಅಭಿನಯಿಸಿದರು.
ರೊ. ಆರ್.ಎಂ. ಗೊಗೆರಿ ಈ ನಾಟಕವನ್ನು ನಿರ್ದೇಶಿಸಿದ್ದರು ಮತ್ತು ಅಭಿನಯಿಸಿದ್ದರು.
ವೇದಿಕೆಯಲ್ಲಿ ನೆರೆದಿದ್ದ ರೋಟರಿ ಅಧ್ಯಕ್ಷ ರೊ. ಸುದರ್ಶನ ನಾಯಕ್, ಕಾರ್ಯದರ್ಶಿ ರೊ. ಗಣೇಶ್ ಹೆಗ್ಡೆ ಕೆ, ಬುಲೆಟಿನ್ ಸಂಪಾದಕ ರೊ. ಡಾ. ಸತೀಶ್ ಕುಮಾರ್ ಶೆಟ್ಟಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಕಲಾವಿದರನ್ನು ಅಭಿನಂದಿಸಿದರು.ಬೊಳುoಬು ಗೋಪಾಲಕೃಷ್ಣ ಭಟ್ ಅವರು ನಾಟಕದ ಪೂರ್ಣ ಛಾಯಾಗ್ರಹಣ ಮಾಡಿದರು.
ನಾಟಕದ ಕೊನೆಯಲ್ಲಿ ಪ್ರತಿಭಾವಂತ ಮಕ್ಕಳನ್ನು ಕಂಡು ಹಳ್ಳಿಯ ಮುಖಂಡರು ತಪ್ಪು ಅರಿತು ಶಿಕ್ಷಕರನ್ನು ಗೌರವಿಸುವ ದೃಶ್ಯವು ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಭೂಮಿಕೆಯಲ್ಲಿದ್ದ , ಲಯನ್ ಆಯುಷ್ ಫೆಡರೇಷನ್ ಉಪಾಧ್ಯಕ್ಷ ಮೂಲವ್ಯಾಧಿ ತಜ್ಞ ಡಾ. ಸುರೇಶ್ ನೆಗಳಗುಳಿ ಅವರು ಸಹ ಕಲಾವಿದರನ್ನು ಅಭಿನಂದಿಸಿದರು.
