ಕಟೀಲು ದೇವಿ ಸನ್ನಿಧಿಯಲ್ಲಿ ಯುಎಇ ಯಕ್ಷಗಾನ : ಅಭ್ಯಾಸ ಕೇಂದ್ರದ ಕಲಾವಿದರಿಂದ ಗೆಜ್ಜೆಸೇವೆ

0
4

ಕಟೀಲು : ಮಾತು ಕುಣಿತ ಸಂಗೀತ ಬಣ್ಣ ಸಾಹಿತ್ಯ ಹೀಗೆ ಕಲಾ ವೈವಿಧ್ಯವನ್ನು ಹೊಂದಿದ ಯಕ್ಷಗಾನವನ್ನು ವಿದೇಶದಲ್ಲಿ ಇದ್ದುಕೊಂಡು ಕಲಿತು ಪ್ರದರ್ಶನ ನೀಡುವ ಮೂಲಕ ಶ್ರೀ ದೇವೀ ಸನ್ನಿಧಿಯಲ್ಲಿ ನೀಡುತ್ತಿರುವುದು ಅಭಿನಂದನೀಯ. ಯಕ್ಷಗಾನ ಅಭ್ಯಾಸ ಕೇಂದ್ರ ಹನ್ನೊಂದು ವರುಷಗಳಿಂದ ಯಕ್ಷಗಾನ ಕಲಾ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿದೆ ಎನ್ನುವುದು ಅಭಿನಂದನೀಯ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.

ಅವರು ಕಟೀಲು ದೇಗುಲದ ಸರಸ್ವತಿ ಸದನದಲ್ಲಿ ಯುಎಇ ಅಭ್ಯಾಸ ಕೇಂದ್ರದ ಮಕ್ಕಳ ಗೆಜ್ಜೆ ಸೇವೆಯ ಅಂಗವಾಗಿ ದಶಾವತಾರ ಯಕ್ಷಗಾನ ಪ್ರದರ್ಶನದ ಮುಂಚಿತ ಆಶೀರ್ವದಿಸಿದರು. ದೇಗುಲದ ಅರ್ಚಕರಾದ ವೆಂಕಟ್ರಮಣ ಆಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಯುಎಇ ತಂಡದ ಸಂಚಾಲಕ ಕೊಟ್ಟಿಂಜ ದಿನೇಶ್ ಶೆಟ್ಟಿ, ಗುರು ಶೇಖರ ಶೆಟ್ಟಿಗಾರ್ ಮತ್ತಿತರರಿದ್ದರು. ಬಳಿಕ ದಶಾವತಾರ ನಡೆಯಿತು. ದಿನೇಶ್ ಕೊಟ್ಟಿಂಜ ಸ್ವಾಗತಿಸಿದರು. ಸುದರ್ಶನ ಆಚಾರ್ಯ ನಿರೂಪಿಸಿದರು.