ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಉಬರ್ ಸೇವೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ವಿಮಾನದಿಂದ ಇಳಿದ ತಕ್ಷಣವೇ ಸುಲಭ ಹಾಗೂ ವೇಗವಾಗಿ ಕ್ಯಾಬ್ ಸೇವೆ ಪಡೆಯಲು ಹೊಸ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ.
ಇನ್ನು ಮುಂದೆ ಪ್ರಯಾಣಿಕರು ಕ್ಯಾಬ್‌ಗಾಗಿ ದೀರ್ಘ ಸಮಯ ಕಾಯಬೇಕಾದ ಅಗತ್ಯವಿಲ್ಲ. ವಿಮಾನ ನಿಲ್ದಾಣದಲ್ಲೇ ಉಬರ್ ಸಹಾಯ ಸಿಬ್ಬಂದಿ ಲಭ್ಯವಿದ್ದು, ಕ್ಯಾಬ್ ಬುಕ್ಕಿಂಗ್, ವಾಹನ ಪತ್ತೆ ಹಾಗೂ ಪಿಕಪ್ ಪ್ರಕ್ರಿಯೆಯಲ್ಲಿ ನೇರ ನೆರವು ನೀಡಲಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಉಬರ್ ಪಿಕಪ್ ವಲಯ (Pickup Zone) ಅನ್ನು ನಿರ್ಮಿಸಲಾಗಿದ್ದು, ಇದರಿಂದ ವಾಹನವನ್ನು ಸುಲಭವಾಗಿ ಗುರುತಿಸಿ ವೇಗವಾಗಿ ಪ್ರಯಾಣ ಆರಂಭಿಸಬಹುದಾಗಿದೆ.
ಇದಲ್ಲದೆ, ಪ್ರಯಾಣಿಕರು ಆರಾಮವಾಗಿ ಕಾಯಲು ಉಬರ್ ಲೌಂಜ್ (Uber Lounge) ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಕ್ಯಾಬ್ ಬರುವವರೆಗೆ ನಿರಾಳವಾಗಿ ಕುಳಿತುಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.
ಈ ಹೊಸ ಸೌಲಭ್ಯಗಳ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚು ಸುಗಮ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಪ್ರಯಾಣ ಅನುಭವ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಉಬರ್ ಪ್ರತಿನಿಧಿಗಳು ತಿಳಿಸಿದ್ದಾರೆ.

