ಮಂಗಳೂರು : ಅಶೋಕನಗರ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ದಿನಾಂಕ 21-06-2026ರ ಭಾನುವಾರ ಶಾಲೆಯ ಆವರಣದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಆನಂದ ಬಿ. ರ‍್ಕೇರ ಅವರು ವಹಿಸಿದ್ದರು. ಇದೇ ಸಂದರ‍್ಭದಲ್ಲಿ ಮಾಜಿ ಕಾರ‍್ಯದರ್ಶಿ ತುಕಾರಾಂ ಅವರು ವಾರ್ಷಿಕ ವರದಿಯನ್ನು ಹಾಗೂ ಮಾಜಿ
ಕೋಶಾಧಿಕಾರಿ ಮನೋ ರಮಾ ಉಮೇಶನ್ ಅವರು ವರ‍್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು.
ಸಭೆಯಲ್ಲಿ2026-27 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ರ‍್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಮುಖ ಪದಾಧಿಕಾರಿಗಳು:
● ಗೌರವಾಧ್ಯಕ್ಷರು: ರಾಮಚಂದ್ರ ಸುವರ್ಣ
● ಅಧ್ಯಕ್ಷರು: ಆನಂದ ಬಿ. ಕರ‍್ಕೇರ
● ಉಪಾಧ್ಯಕ್ಷರು: ಶಂಕರ ಎನ್. ಪೂಂಜ ಮತ್ತು ಶೋಭಾ ಲೋಕೇಶ್
● ಕಾರ್ಯದರ್ಶಿ : ಚಂದ್ರೇಶ್ ರಾವ್
● ಜೊತೆ ಕಾರ್ಯದರ್ಶಿಗಳು: ವಾಸುದೇವ ಶೆಟ್ಟಿಗಾರ್ ಮತ್ತುಸಿಂಚನ
● ಕೋಶಾಧಿಕಾರಿ: ದೀಪ್ತಿಶೆಟ್ಟಿ
ಗೌರವ ಸಲಹೆಗಾರರು ಮತ್ತು ಕಾರ‍್ಯಕಾರಿ ಸಮಿತಿ:
● ಗೌರವ ಸಲಹೆಗಾರರು: ಬಿ. ಶ್ರೀನಿವಾಸ ಮತ್ತುಉಮೇಶ್ ಕುಮಾರ್
● ಸದಸ್ಯರು: ರಾಧಾಕೃಷ್ಣ, ತುಕಾರಾಂ, ಕೌಶಿಕ್, ನಯನ, ಮಾಲಾ, ಕರ‍್ತಿಕ್, ಯಶಸ್ವಿನಿ, ಸೂರಜ್,
ಲಕ್ಷ್ಮಿ ಪಿ. ರ‍್ಕೇರ, ಕೃಷ್ಣ, ಇಂಚರ, ಮನೋ ರಮಾ ಉಮೇಶನ್ ಮತ್ತುಟಿ ಸುಬ್ರಹ್ಮಣ್ಯ ರಾವ್.
ಶಾಲೆಯ ಅಭಿವೃದ್ಧಿ ಕಾರ‍್ಯಗಳಿಗೆ ಪೂರಕವಾಗಿ ಶ್ರಮಿಸುವುದಾಗಿ ಹಾಗೂ ಹಳೆ ವಿದ್ಯಾರ‍್ಥಿಗಳನ್ನು ಒಗ್ಗೂಡಿಸಿ ಸಂಘವನ್ನು ಬಲಪಡಿಸುವುದಾಗಿ ನೂತನ ಸಮಿತಿಯು ಈ ಸಂದರ‍್ಭದಲ್ಲಿ ಪ್ರಕಟಿಸಿದೆ.

