ತುಳುನಾಡು ವಾರ್ತೆ ವರದಿಗಾರ ಉದಯ ಕುಲಾಲ್ ಕಳತ್ತೂರು ಅವರಿಗೆ ‘Salute The Silent Star’ ಗೌರವ

0
37

ಕಾಪು: ಜೇಸಿಐ ಕಾಪು ವತಿಯಿಂದ ಕಾಪುವಿನ ವೀರಭದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜೇಸಿ ಸಪ್ತಾಹ–2026ರ ‘ಸಂಚಲನ’ ಸಮಾರೋಪ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಹಾಗೂ ತುಳುನಾಡು ವಾರ್ತೆ ವಾರಪತ್ರಿಕೆಯ ಕಾಪು ತಾಲೂಕು ವರದಿಗಾರ ಉದಯ ಕುಲಾಲ್ ಕಳತ್ತೂರು ಅವರನ್ನು ‘Salute The Silent Star’ ಗೌರವ ನೀಡಿ ಸನ್ಮಾನಿಸಲಾಯಿತು.

ದಾನಿಗಳ ಮೂಲಕ ವಿವಿಧ ಸೇವಾ ಕಾರ್ಯಗಳಿಗೆ ನೆರವು ಒದಗಿಸುವುದು ಸೇರಿದಂತೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಯೋಗೀಶ್ ಶೆಟ್ಟಿ ಬಾಲಾಜಿ, ಜೇಸಿಐ ಕಾಪು ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ಉದಯವಾಣಿ ಪತ್ರಿಕೆಯ ಕಾಪು ಭಾಗದ ವರದಿಗಾರ ರಾಕೇಶ್ ಕುಂಜೂರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಜೇಸಿ ಸಪ್ತಾಹದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಲವು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.