ಉಡುಪಿ; ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ ದಲ್ಲಿ ನೆಲೆ ನಿಂತಿರುವ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಪೂಜ್ಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿಯಲ್ಲಿಇಂದು ಶ್ರೀ ರಾಮ ವಿಠಲ್ ಹಾಗೂ ಶ್ರೀ ಶನೈಶ್ವರಸ್ವಾಮೀ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಸಗ್ರಹಮಖ ಶನಿಶಾಂತಿ , ಪುರಸ್ಪರ ಜಯ ನರಸಿಂಹ ಯಾಗ ಸಂಪನ್ನ ಗೊಂಡಿತ್ತು ,ಶ್ರೀ ಶನೈಶ್ವರ ಸ್ವಾಮೀ ಉತ್ಸವ, ಪಲ್ಲಪೂಜೆ , ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ,ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, ನೆಡೆಯಿತು. ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಅರ್ಚಕವೃಂದದವರು ನೆರವೇರಿಸಿದರು ದೇವಳದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ , ವಿಜಯಲಕ್ಷ್ಮೀ ಆಚಾರ್ಯ , ಪ್ರಹ್ಲಾದ ಆಚಾರ್ಯ, ಪೂರ್ಣಿಮಾ ಆಚಾರ್ಯ , ಯತೀಶ್ ಆಚಾರ್ಯ ಹಾಗೂ ಟ್ರಸ್ಟನ ಪದಾಧಿಕಾರಿಗಳು , ನೂರಾರು ಭಕ್ತರೂ ಉಪಸ್ಥರಿದ್ದರು.
ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ ; ಸಗ್ರಹಮಖ ಶನಿಶಾಂತಿ , ಪುರಸ್ಪರ ಜಯ ನರಸಿಂಹ ಯಾಗ ಸಂಪನ್ನ
RELATED ARTICLES