ಉಡುಪಿ ನಗರ ಬಿಜೆಪಿ ಅಟಲ್‌ ಜನ್ಮಶತಾಬಿ ಪ್ರಯುಕ್ತ ಅಂತ‌ರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ ಉದ್ಘಾಟನೆ

0
28

ಉಡುಪಿ: ಭಾರತ ಕಂಡ ಶ್ರೇಷ್ಠ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ನಮಗೆ ನಿತ್ಯ ಸ್ಮರಣೀಯರಾಗಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಅಟಲ್ ಬಿಹಾರಿ ವಾಜಪೇಯಿ ಅವರ ‘ಜನ್ಮ ಶತಾಬಿ’ ಆಚರಣೆಯ ಅಂಗವಾಗಿ ಬಿಜೆಪಿ ಉಡುಪಿ ನಗರ ವತಿಯಿಂದ ಶಾಸಕ ಯಶ್ ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ನಗರ ಯುವ ಮೋರ್ಚಾ ಮತ್ತು ನಗರ ಮಹಿಳಾ ಮೋರ್ಚಾ ಸಹಯೋಗದಲ್ಲಿ ನಡೆದ ಅಂತ‌ರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಹಸಿವು, ದಾರಿದ್ರ ಮುಕ್ತ

ಅಟಲ್ ಅವರು ಈ ದೇಶದ ಪ್ರಧಾನಿಯಾಗಿ ಅವರು ದೇಶವನ್ನು ಹಸಿವು ಮುಕ್ತ, ದಾರಿದ್ರಮುಕ್ತ, ಭಯಮುಕ್ತವನ್ನಾಗಿ ಮಾಡಬೇಕು ಎಂದು ಕನಸು ಕಂಡು ಅದನ್ನು ನನಸಾಗಿಸಿದರು ಎಂದರು. ಪೋಖರಣ್ ಅಣು ಸ್ಫೋಟ ಮಾಡುವ ಸಂದರ್ಭದಲ್ಲಿ ಶತ್ರುಗಳ ನಿಯಂತ್ರಣ, ದೇಶದೊಳಗಿನ ಆಂತರಿಕ ಭದ್ರತೆ, ಅಮೇರಿಕಾದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಕಾರ್ಗಿಲ್ ಯುದ್ಧ ನಿಲ್ಲಿಸಿ ಎಂದು ಅಮೆನ್ನು ಬೆದರಿಸಿದರೂ ಅಟಲ್ ಅಂಜದೇ ಪಾಕಿಸ್ತಾನ ಹಿಮ್ಮೆಟ್ಟುವವರೆಗೂ ಯುದ್ಧ ನಿಲ್ಲಿಸದೇ ಧೈರ್ಯ ಪ್ರದರ್ಶಿಸಿದ್ದರು ಎಂದು ನೆನಪಿಸಿಕೊಂಡರು. ಅಂದು ಅಟಲ್ ಬಿತ್ತಿದ ರಾಷ್ಟ್ರ ಭಕ್ತಿಯ ಬೀಜದಿಂದಾಗಿಯೇ ಇಂದು ಇಡೀ ವಿಶ್ವದಲ್ಲೇ ಬಿಜೆಪಿ ನ.1 ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಉದಾತ್ತ ಚಿಂತನೆ ಬಿತ್ತಿದ್ದರು

ರಾಜ್ಯ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಾಸಕ ಹರೀಶ್ ಪೂಂಜ ಮಾತನಾಡಿ, ಅಟಲ್ ಅವರು ದೇಶದ ರಾಜಕಾರಣಕ್ಕೆ ಉದಾತ್ತ ಚಿಂತನೆ ಬಿತ್ತಿದ್ದರು. ಗ್ರಾಮೀಣ ಪ್ರದೇಶದ ಜನ ಶಿಕ್ಷಿತರಾಗಿದ್ದಾರೆ ಸುಸಂಕೃತರಾಗಿದ್ದಾರೆ, ವಿಕಸಿತ ಆಗಿದೆ ಎಂದರೆ ಅದಕ್ಕೆ ಕಾರಣ ಆಟಲ್ ಬಿಹಾರಿ ವಾಜಪೇಯಿ ಎಂದು ಶ್ಲಾಘಿಸಿದರು. ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದು ಅಟಲ್ ಅವರ ಸಾಧನೆ. ಸರ್ವ ಶಿಕ್ಷಣ ಅಭಿಯನದ ಮೂಲಕ ಶಿಕ್ಷಣ ಕ್ರಾಂತಿಗೆ ಹಾಗೂ ಆದುನಿಕತೆಯ ಮೊಬೈಲ್ ಕ್ರಾಂತಿಗೂ ಕೂಡ ಅವರೇ ಕಾರಣ ಎಂದು ತಿಳಿಸಿದರು.

ಶಾಸಕ ಯಶ್ ಪಾಲ್ ಸುವರ್ಣ ಪ್ರಾಸ್ತವಿಕವಾಗಿ ಮಾತನಾಡಿದರು.

ಕ್ರೀಡಾ ಚಟುವಟಿಕೆ ಮೂಲಕ ಸಂಘಟನೆಗೆ ಶಕ್ತಿ : ಯಶ್ ಪಾಲ್ ಸುವರ್ಣ

ಕೋವಿಡ್ ಗೂ ಮೊದಲು ವಾಲಿಬಾಲ್ ಪಂದ್ಯಾಟ ನಡೆಸಲಾಗಿತ್ತು. ಆ ಬಳಿಕ ಮೊದಲ ಬಾರಿಗೆ ಈ ವರ್ಷದ ಅಟಲ್ ಶತಾಬ್ಬಿಯಂದು ಆರಂಭಿಸಿದ್ದೇವೆ. ನಮ್ಮ ಜಿಲ್ಲೆ ಸಂಘಟನಾತ್ಮಕವಾಗಿ ಸದೃಢ ಮಾಡುವ ಕಾರ್ಯ ಮಾಡಲಿದ್ದೇವೆ. ಸ್ಥಳೀಯ ಮಟ್ಟದ ಚುನಾವಣೆಗಳು ಮುಂದಿರುವುದರಿಂದ ಇಂತಹ ಚಟುವಟಿಕೆಗಳು ಸಂಘಟನೆಗೆ ಸಹಕಾರಿಯಾಗುತ್ತದೆ.

ಈ ಸಂದರ್ಭದಲ್ಲಿ ಶಾಸಕರಾದ ಎ. ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ ಎಂಎಲ್ಲಿ ಕಿಶೋರ್ ಕುಮಾರ್ ಪುತ್ತೂರು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನಗರಸಭೆ ನಿಕಟಮೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಗಿರೀಶ್ ಎಂ ಅಂಚನ್, ಉದಯಕುಮಾರ್ ಶೇಟ್ಟಿ ದಿನೇಶ್ ಅಮೀನ್, ರಾಜೀವ್ ಕುಲಾಲ್, ವಿಜಯ ಕೊಡವೂರು, ಮಟ್ಟಾರುರತ್ನಾಕರ ಹೆಗ್ಡೆ, ಸಂಧ್ಯಾ ರಮೇಶ್,
ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಿರಣ್ ಕುಮಾರ್ ಬೈಲೂರು, ಜಗದೀಶ್ ಆಚಾರ್ಯ, ರಶ್ಮಿತಾ ಬಿ. ಶೆಟ್ಟಿ ನೀತಾ ಪ್ರಭು, ಶ್ರೀವತ್ಸ ಲಕ್ಷ್ಮೀಶ ಬಂಗೇರ, ಸುಮಾ ನಾಯ್ ಡೇನಿಸ್ ಮಾಸ್ಕರೇನಸ್, ದಿನಕರ ಬಾಬು, ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here