ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳಕಾಡು ಇಲ್ಲಿಗೆ 20204 -25ರಂದು ರೀಚಿಂಗ್ ಹ್ಯಾಂಡ್ಸ್ ಬೆಂಗಳೂರು ಇವರಿಂದ CSR ಯೋಜನೆಯಿಂದ ಹುಡುಗಿಯರ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಇಂದು ಅದರ ಶಿಲಾನ್ಯಾಸವನ್ನು ಮಾನ್ಯ ಶಾಸಕರಾದ ಶ್ರೀ ಯಶ್ ಪಾಲ್ ಎ ಸುವರ್ಣ ರವರು ನೆರವೇರಿಸಿ ಶುಭ ಹಾರೈಸಿದರು ನಂತರ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು ಈ ಸಮಯದಲ್ಲಿ SDMC ಅಧ್ಯಕ್ಷರಾದ ಡಾಕ್ಟರ್ ವಿರೂಪಾಕ್ಷ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ
ಗಣೇಶ್ ಶೇಟ್ , ZP ಸಮಿತಿಯ ಉಪಾಧ್ಯಕ್ಷರಾದ ನಾಗಭೂಷಣ್ ಶೇಟ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗೇಶ್ ಪ್ರಭು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ. ಶ್ರೀಮತಿ ಪೂರ್ಣಿಮಾ ,SDMC ಉಪಾಧ್ಯಕ್ಷರಾದ ಸೌಮ್ಯಾ ಶೇಟ್, SDMC ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾಶಿಕ್ಷಕರು, ಪತಂಜಲಿ ಯೋಗ ಸಿಬ್ಬಂದಿಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಆಗಮಿಸಿದ ಅತಿಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕುಸುಮ G ಮೆಂಡನ್ ಸ್ವಾಗತಿಸಿ ವಂದಿಸಿದರು