ಉಡುಪಿ : ಮೂಡ ನಿಡಂಬುರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ; ಮುಷ್ಠಿ ಕಾಣಿಕೆ ಸಮರ್ಪಣೆ

0
2

ಉಡುಪಿ : ಮೂಡ ನಿಡಂಬುರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಸಮಗ್ರ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠೆ ಅಂಗವಾಗಿ ಆದಿತ್ಯವಾರ ಮುಷ್ಟಿ ಕಾಣಿಕೆ ಸಮರ್ಪಣೆಗೆ ಶಾಸಕ ಯಶಪಾಲ್ ಸುವರ್ಣ ಮುಷ್ಠಿ ಕಾಣಿಕೆ ಸಮರ್ಪಿಸಿ ಚಾಲನೆ ನೀಡಿ ಹಿಂದೂ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ ಹಿಂದೂ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದೆ ಬರಬೇಕು ಓರ್ವ ಭಕ್ತನಾಗಿ ಶಾಸಕನಾಗಿ ಧಾರ್ಮಿಕ ಇಲಾಖೆಯಿಂದ ಹೆಚ್ಚಿನ ಅನುದಾನ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು ಗರೋಡಿಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಪ್ರಸಾದ್ ರಾಜ್ ಕಾಂಚನ್ , ವಿನಯಕುಮಾರ್ ಸೊರಕೆ , ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು , ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಟಿ ಜಿ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು , ವೇದಿಕೆಯಲ್ಲಿ ನಗರ ಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ ,ಆಡಳಿತ ಮುಕ್ತೇಸರ ಪ್ರಭಾತ್ ಶೆಟ್ಟಿ , ಸಹಕಾರಿ ದುರೀಣ ಜಯಕರ್ ಶೆಟ್ಟಿ ಇಂದ್ರಾಳಿ , ಸವಿತಾ ಹರೀಶರಾಮ್ , ಇಂಜಿನಿಯರ್ ರಂಜನ್ , ಸುಪ್ರಸಾದ್ ಶೆಟ್ಟಿ , ಉದಯಕುಮಾರ್ ಶೆಟ್ಟಿ , ಗುಂಡು ಶೆಟ್ಟಿ , ಶೇಖರ್ ಜತ್ತನ್ , ಹರಿಯಪ್ಪ ಕೋಟ್ಯಾನ್ , ಡಾ ಸಂದೀಪ್ ಸನಿಲ್ , ಸುರೇಶ ಶೆಟ್ಟಿ , ಉದಯ ಶೆಟ್ಟಿ , ಆರ್ ಕೆ ರಾಮಕೃಷ್ಣ ವಾಗ್ಲೇ , ಗುರುರಾಜ್ ಶೆಟ್ಟಿ , ವಿಠಲ್ ಶೆಟ್ಟಿ , ಮೀನಾಕ್ಷಿ ಮಾಧವ , ಗರೋಡಿಯ ಗುರಿಕಾರರು , ವಿವಿಧ ಪಧಾಧಿಕಾರಿಗಳು ಉಪಸ್ಥರಿದ್ದರು , ಮುಷ್ಠಿ ಕಾಣಿಕೆಯ ದಿನದ ಆರಂಭದಲ್ಲಿಯೇ ಜೀರ್ಣೋದ್ಧಾರ ಕೆ ನೆರೆದ ಭಕ್ತರಿಂದ ಸುಮಾರು 50 ಲಕ್ಷ ಕ್ಕಿಂತ ಹೆಚ್ಚಿನ ಹಣ ನೀಡಿ ಸಹಕರಿಸಿದರು , ದಾನಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಮುಷ್ಟಿ ಕಾಣಿಕೆ ಸಮರ್ಪಣೆ ಸೇವೆಯನ್ನು 8-6/26 ರಿಂದ 15-6-26 ರ ವರಗೆ ಚಾಲ್ತಿಯಲ್ಲಿ ಇಡಲಾಗಿದೆ.) ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿದರು , ಶಿಕ್ಷಕ ಸತೀಶ್ ನಿರೂಪಿಸಿ ವಂದಿಸಿದರು , ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ , ಆಡಳಿತ ಮಂಡಳಿಯ ಸದಸ್ಯರು ಹಾಗೂ ಲೆಪ್ಪಿನವರು ಮತ್ತು ಜೀರ್ಣೋದ್ಧಾರ ಸಮಿತಿ ಪಧಾಧಿಕಾರಿಗಳು , ಮಾಗಣೆಯ ಗ್ರಾಮಸ್ಥರು ಉಪಸ್ಥರಿದ್ದರು.

LEAVE A REPLY

Please enter your comment!
Please enter your name here