ಉಡುಪಿ : ಸೈಲಸ್ ಪದವಿ ಪೂರ್ವ ಕಾಲೇಜು – ಸಾಧಕರಿಗೆ ಸನ್ಮಾನ

0
8

ಉಡುಪಿ : ನಿಟ್ಟೂರಿನ ಸೈಲಸ್ ಪದವಿಪೂರ್ವ ಕಾಲೇಜಿನಲ್ಲಿ 2025- 26ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ 14 ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಶನಿವಾರ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಸ್ಟಲ್ಎಜುಕೇಶನ್ ಟ್ರಸ್ಟಿನ ಉಪಾಧ್ಯಕ್ಷ ಸಂತೋಷ್ ಮಾಬೆನ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ ವಿದ್ಯಾರ್ಥಿಗಳ ಪರಿಶ್ರಮ ,ಪೋಷಕರ ತ್ಯಾಗ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದ್ದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದರು.

ಸನ್ಮಾನಿತರ ಪರವಾಗಿ ವಿಜ್ಞಾನ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ ಗ್ರೇಸಿಲ್ಲ ಜಾಯ್ಲಿನ್ ಹಾಗೂ ವಾಣಿಜ್ಯ ವಿಭಾಗದ ಪ್ರಥಮ ಸ್ಥಾನಿ ಅದೀಬ ಸನಾ ಬೇಗಮ್, ಸಂಸ್ಥೆ ಹಾಗೂ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಸಹಕಾರವನ್ನು ನೆನೆದು ಕೃತಜ್ಞತೆ ಸಲ್ಲಿಸಿದರು. ಹೆತ್ತವರ ಪರವಾಗಿ ಸೌಮ್ಯ ಹಾಗೂ ವಾಸಂತಿ ಅಂಬಲಪಾಡಿ ಮಕ್ಕಳ ಸಾಧನೆಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು. ಪ್ರಿನ್ಸಿಪಾಲ್ ಡಾ. ಜಾರ್ಜ್ ಮಾತನಾಡಿ, ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಉಪನ್ಯಾಸಕ ವರ್ಗದ ಪರವಾಗಿ ಗೀತಾಕುಮಾರಿ ಮಾತನಾಡಿದರು.ಸಂಸ್ಥೆಯ ಟ್ರಸ್ಟಿ ಶಾರ್ಲೆಟ್ ಮಾಬೆನ್ ಹಾಗೂ ಸೈಲಸ್ ಇಂಟರ್ನ್ಯಾಷನಲ್ ಸ್ಕೂಲ್ ಪ್ರಿನ್ಸಿಪಾಲ್ ಜೆಸಿಂತಾ ಡಿಕೋಸ್ಟ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಸಮೀಕ್ಷಾ ,ರೇಷ್ಮಾ, ವೈಷ್ಣವಿ ,ಅನ್ವಿತಾ ಪ್ರಾರ್ಥಿಸಿದರು . ಉಪನ್ಯಾಸಕಿ ಪ್ರಭಾ ಸ್ವಾಗತಿಸಿ, ಪೂರ್ಣಿಮಾ ವಂದಿಸಿದರು .ರಂಜನ್ ಸನ್ಮಾನಿತರ ಪಟ್ಟಿ ವಾಚಿಸಿದರು ಹಾಗೂ ಶ್ರೇಯಂಕಾ ನಿರೂಪಿಸಿದರು.

LEAVE A REPLY

Please enter your comment!
Please enter your name here