ಅಶ್ವಿಜ ಶ್ರೀಧರ್ ಬೆಳ್ತಂಗಡಿ ರವರ ಪ್ರಕೃತಿ ಕಾಂತಿ ಕವನ ಸಂಕಲನ ಬಿಡುಗಡೆ

0
22

ಪುತ್ತೂರು : ದಿನಾಂಕ :12.04.2026 ರಂದು ಚಿಗುರೆಲೆ ಸಾಹಿತ್ಯ ಬಳಗದ ವಾರ್ಷಿಕೋತ್ಸವ ಪಂಚ ಕೃತಿ ಲೋಕಾರ್ಪಣೆ ಸದ್ಭಾವ ಚಿಗುರು ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ವೈವಿಧ್ಯ ಚಿಗುರೆಲೆ ಸಾಹಿತ್ಯ ಬಳಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಸಹಕಾರದಲ್ಲಿ, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಯುವಕವಯತ್ರಿ ಅಶ್ವಿಜ ಶ್ರೀಧರ್ ರವರ ಪ್ರಕೃತಿ ಕಾಂತಿ ಕವನ ಸಂಕಲನವನ್ನು ಯಕ್ಷಗಾನ ಅರ್ಥಧಾರಿ,ನಿವೃತ್ತ ಉಪನ್ಯಾಸಕರಾದ ಮಹಾಲಿಂಗೇಶ್ವರ ಭಟ್ ಮಧುವನ ಲೋಕಾರ್ಪಣೆಗೊಳಿಸಿದರು.

ಸಮಾರಂಭದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಸಂಚಾಲಕರಾದ ಗೋಕುಲ್ ನಾಥ್ ಪಿ ವಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್,ಎಂ ಎಸ್ ನಾಗರಾಜ್ ಮೂಡಿಗೆರೆ, ಬಾಲಕೃಷ್ಣ ಕಾರಂತ್ ಅಳಿಕೆ, ನಾರಾಯಣ ರೈ ಕುಕ್ಕುವಳ್ಳಿ , ಶಶಿಕಲಾ ವರ್ಕಾಡಿ, ಸುಲೋಚನಾ ಪಿ ಕೆ, ರಮೇಶ್ ಉಳಯ, ಪತ್ರಕರ್ತರಾದ ಉದಯ್ ಕುಮಾರ್ ಯು ಎಲ್,ವೇದಿಕೆಯಲ್ಲಿ ಅಶ್ವಿಜ ಶ್ರೀಧರ್ ರವರ ತಂದೆ ತಾಯಿ,ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here