Saturday, June 14, 2025
HomeUncategorizedಉಡುಪಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ವೃತ್ತಿ ಮಾರ್ಗದರ್ಶನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಶನಿವಾರ ಬ್ರಹ್ಮಾವರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮೂಳೂರು ಅಲ್ ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮೌಲಾನ ಯು.ಕೆ.ಮುಸ್ತಫ ಸಅದಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಈ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಮುಸ್ಲಿಮ್ ಸಮುದಾಯದ ಒಟ್ಟು 191 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅದೇ ರೀತಿ ಶೇ.100 ಫಲಿತಾಂಶ ಪಡೆದ ಉಡುಪಿ ಜಿಲ್ಲೆಯ
ಮುಸ್ಲಿಮ್ ಸಮುದಾಯದ ಶಾಲೆಗಳ ಮುಖ್ಯಸ್ಥರನ್ನು
ಅಭಿನಂದಿಸಲಾಯಿತು.

20 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಮಸೀದಿಯಲ್ಲಿ ಇಮಾಮತ್ ನಿರ್ವಹಿಸುತ್ತಿರುವ 12 ಉಲಮಾಗಳನ್ನು ಗೌರವಿಸಲಾಯಿತು. ಸಾಧಕರಾದ ಉಡುಪಿ ಅವೆದಿಸ್ ಇನ್ಫೋಸಿಸ್ಟಮ್‌ನ ಡಿಜಿಟಲ್ ಮಾರ್ಕೆಟರ್ ಮುಆಝ್ ಮುಹಮ್ಮದ್, ಕುಂದಾಪುರ ಎನ್‌ಎನ್‌ಒ ಕಮ್ಯುನಿಟಿ ಸೆಂಟರ್‌ನ ಫಾತಿಮಾ ಮುಸ್ಸ್ಕಾನ್, ಶೇಕ್ ಮುಹಮ್ಮದ್ ಫಾರ್ಮನ್‌ರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಕೋಶಾಧಿಕಾರಿ ಪೀರ್ ಸಾಹೇಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಾಹೀರ್ ನಾಖುದಾ ಗಂಗೊಳ್ಳಿ, ಜಿಲ್ಲಾ ಕೋಶಾಧಿಕಾರಿ ನಕ್ಷಾ ಯಹ್ಯಾ ಮಲ್ಪೆ ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರು, ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ದಸ್ತಗೀರ್ ಕಂಡ್ಲುರ್, ಬ್ರಹ್ಮಾವರ ಅಧ್ಯಕ್ಷ ತಾಜುದ್ದೀನ್ ಇಬ್ರಾಹೀಂ, ಕಾಪು ಅಧ್ಯಕ್ಷ ಅಶ್ರಫ್ ಪಡುಬಿದ್ರೆ, ಕಾರ್ಕಳ ಅಧ್ಯಕ್ಷ ಶಾಕಿರ್ ಹುಸೇನ್‌ ಶಿಷಾ, ಹೆಬ್ರಿ ಅಧ್ಯಕ್ಷ ಮುಹಮ್ಮದ್ ರಫೀಕ್ ಅಜೆಕಾರು ಉಪಸ್ಥಿತರಿದ್ದರು.

ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ಮೌಲಾನ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾಝಿಲ್ ಆದಿಉಡುಪಿ ವಂದಿಸಿದರು. ಫಝಲ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಶೈಕ್ಷಣಿಕ ಮಾರ್ಗದರ್ಶಕ ರಫೀಕ್ ಮಾಸ್ಟರ್ ಮಂಗಳೂರು, ವಕೀಲ ಸುಹಾನ್ ಸಾಸ್ತಾನ, ಶಿವಮೊಗ್ಗ ಮಲ್ನಾಡ್ ಲೈಫ್‌ಲೈನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಇರ್ಫಾನ್ ಅಹ್ಮದ್ ವೃತ್ತಿ ಮಾರ್ಗದರ್ಶನ ನೀಡಿದರು.

RELATED ARTICLES
- Advertisment -
Google search engine

Most Popular