ಚಿರತೆಯ ಹಾವಳಿ ನಿಯಂತ್ರಿಸಲು ವಲಯ ಅರಣ್ಯಾಧಿಕಾರಿ ಯವರನ್ನು ಭೇಟಿಮಾಡಿ ಮನವಿಪತ್ರ ಸಲ್ಲಿಸಿದ ಉಡುಪಿ ತಾಲೂಕು ತುಳುವ ಮಹಾಸಭಾ

0
105

ಉಡುಪಿ ತಾಲೂಕು ತುಳುವ ಮಹಾಸಭಾದ ಮುಂದಾಳತ್ವದಲ್ಲಿ ಗ್ರಾಮಸ್ಥರ ಮನವಿ ಪತ್ರವನ್ನು ಸ್ವೀಕರಿಸಿದ ಹೆಬ್ರಿ ವಲಯ ಅರಣ್ಯಾಧಿಕಾರಿಯವರಾದ ಶ್ರೀಯುತ ಸಿದ್ದೇಶ್ ಕುಂಬಾರ್ ರವರು ಉತ್ತಮ ರೀತಿಯಲ್ಲಿ ಸ್ಪಂದಿಸಿ, ಇತ್ತೀಚಿನ ದಿನಗಳಲ್ಲಿ ಹೆಬ್ರಿ ವಲಯದಲ್ಲಿ ಅರಣ್ಯ ಇಲಾಖೆಯು ಸೂಕ್ತ ಕ್ರಮಗಳನ್ನು ಕೈಕೊಂಡರೂ ಕೂಡಾ ಚಿರತೆಗಳ ಹಾವಳಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣದ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಯೋಜನೆ ರೂಪಿಸಲು ಸಾರ್ವಜನಿಕರ ಬೆಂಬಲವು ಅತ್ಯಗತ್ಯವಿದೆ ಎಂದು ತಿಳಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಪೆರ್ಡೂರು ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ಅರಣ್ಯ ಪ್ರದೇಶದಿಂದ ಹೊರಬಂದು ಪರಿಸರದ ಕೆಲವು ಜಾನುವಾರು, ಸಾಕು ನಾಯಿಗಳನ್ನು ಕೊಂದಿದ್ದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಹಗಲು ಹೊತ್ತಿನಲ್ಲಿಯೇ ಚಿರತೆಗಳು ಓಡಾಡುತ್ತಿರುವುದರಿಂದ ಜನರು ತಮ್ಮ ದೈನಂದಿನ ಚಟುವಟಿಕೆ ನೆರವೇರಿಸಲು, ಕೆಲಸ ಕಾರ್ಯಗಳಿಗೆ ತೆರಳಲು ಮಕ್ಕಳು ಶಾಲೆಗೆ ಹೋಗಲು ಅನಾನುಕೂಲವಾಗಿದೆ. ಮಾನವ ಮತ್ತು ಸಾಕು ಪ್ರಾಣಿಗಳ ಜೀವ ಹಾನಿಯಾಗುವ ಹೆಚ್ಚಿನ ಸಾಧ್ಯತೆಯಿದ್ದು, ಪರಿಸ್ಥಿತಿ ಹದಗೆಡುವ ಮೊದಲೇ ಸೂಕ್ತ ಕ್ರಮ ಅವಶ್ಯವಾಗಿರುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಮಾನ್ಯ ವಲಯ ಅರಣ್ಯಾಧಿಕಾರಿಯವರು ಹೆಬ್ರಿ ವಲಯ ಉಡುಪಿ ಜಿಲ್ಲೆ ಇವರನ್ನು 08/01/2026 ರಂದು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ, ಶಿವ ಪ್ರಸಾದ್, ದಿನೇಶ್ ಮೆಂಡನ್ ಗ್ರಾಮಸ್ಥರಾದ ದೇವಣ್ಣ ನಾಯಕ್, ವಾಸುದೇವ ಆಚಾರ್ಯ, ಸುನಂದ, ಶಶಿಕಲಾ, ಪ್ರಸನ್ನ ರವರು ಭೇಟಿ ನೀಡಿ ಮನವಿ ಪತ್ರದ ಮುಖೇನ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here