ಉಡುಪಿ: ಜಿಲ್ಲಾ ಸಹಕಾರಿ ಯೂನಿಯನ್ , ಮಹಿಳಾ ಸಹಕಾರ ಸಂಘಗಳಿಗೆ ತರಬೇತಿ ಕಾರ್ಯಾಗಾರ

0
12

ಉಡುಪಿ: ಸಹಕಾರ ಮಹಾಮಂಡಳ ವತಿಯಿಂದ ಜಿಲ್ಲೆಯಲ್ಲಿ ಎಲ್ಲಾ ವಗದ ಸಹಕಾರಿಗಳಿಗೆ ನಿರಂತರ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ನಿರಂತರ ಬೆಳವಣಿಗೆಗೆ ತರಬೇತಿ ಅಗತ್ಯವಿದೆ. ವ್ಯವಹಾರದಲ್ಲಿ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಪರಿಹರಿಸಿಕೊಳ್ಳಲು ಸದವಕಾಶ ಇದಾಗಿದೆ. ಸಮಾಜಕ್ಕೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ತರಬೇತಿ ಸಹಕಾರಿಯಾಗಿದೆ. ಸಹಕಾರ ಕ್ಷೇತ್ರದಲ್ಲಿ ನಿರಂತರ ಬದಲಾವಣೆ ನಡೆಯುತ್ತಿದೆ. ಆರ್ಥಿಕ ವ್ಯವಹಾರದ ಜೊತೆಗೆ ಜನರಿಗೆ ಉಪಯುಕ್ತ ಸೇವೆಗಳನ್ನು ನೀಡಬಹುದು. ಇದರ ಆದಾಯದಿಂದಲೇ ಸಹಕಾರಿ ಸಂಸ್ಥೆ ಮುನ್ನಡೆಯುತ್ತದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರಶೆಟ್ಟಿ ಇಂದ್ರಾಳಿ ಹೇಳಿದರು. .  

ಬಡಗಬೆಟ್ಟು ಸೊಸೈಟಿಯಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರದಲ್ಲಿ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಜಿಲ್ಲಾ ಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.   ಉಪನ್ಯಾಸಕಿ ಬಿಂದು ನಾಯರ್‌  ತರಬೇತಿ ಕಾರ್ಯಾಗಾರ ನೆಡೆಸಿಕೊಟ್ಟರು 

ಸಹಕಾರ ಯೂನಿಯನ್‌ ನಿರ್ದೇಶಕರಾದ ಗಂಗಾಧರ ಶೆಟ್ಟಿ, ಹರೀಶ್‌ ಕಿಣಿ, ಸುಧೀರ್‌ ವೈ., ಹಿರಿಯ ಉಪನ್ಯಾಸಕಿ ಬಿಂದು ನಾಯರ್‌   ಉಪಸ್ಥಿತರಿದ್ದರು. ಸಿಇಒ ಅನುಷಾ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here