ಉಳ್ಳಾಲ :ಮಹೇಶ್ ಮತ್ತು ಶ್ರೀಮತಿ ರಿನಿ ರವರ ಮಗ ಲಿಸನ್ ರವರ ಹುಟ್ಟು ಹಬ್ಬವನ್ನು ಮಕ್ಕಳಿಗೆ ಭಗವದ್ಗೀತೆ ಪುಸ್ತಕ ವಿತರಣೆ ಮಾಡುವ ಮೂಲಕ ಸಂಭ್ರಮಿಸಲಾಯಿತು.
ಇಂದಿನ ಕಾಲದ ಸಂಸ್ಕೃತಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆ ಒಲವು ತೋರಿದ್ದು ನಮ್ಮ ಸನಾತನ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅಂಧಾನುಕರಣೆ ಎದ್ದು ಕಾಣುತ್ತಿದೆ.
ಪ್ರಸ್ತುತವಾಗಿ ಮಕ್ಕಳ ಮನಸ್ಥಿತಿ ಸಂಸ್ಕೃತಿ ಯು ಮಿಶ್ರವಾಗಿದ್ದು.ಬಹುತೇಕ ಜನರು ಭಾರತೀಯ ಸಂಸ್ಕೃತಿ ಸಾಂಪ್ರದಾಯವನ್ನುಮರೆತಿದ್ದು ಪಾಶ್ಚಿಮಾತ್ಯ ಸಂಸ್ಕೃತಿ ಗೆ ತಮ್ಮ ಒಲವನ್ನು ಹೆಚ್ಚಾಗಿ ತೋರುತಿದ್ದಾರೆ.ಹಾಗಾಗಿ ತಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿಸುವ ಸಲುವಾಗಿ ಮಕ್ಕಳಲ್ಲಿ ಎಳೆಯ ವಯಸಿನಲ್ಲಿ ಅರಿವು ಮೂಡಿಸುವುದು ಅನಿವಾರ್ಯವಾಗಿದೆ.
ಇಂತಹ ಸಂದರ್ಭದಲ್ಲಿ ದೇರಳಕಟ್ಟೆ ನ್ಯೂ ಚಿಲ್ಡ್ರನ್ ಪ್ಲೇ ಸ್ಕೂಲ್
ನ ವಿದ್ಯಾರ್ಥಿ ಲಿಸನ್ ರವರ ಹುಟ್ಟು ಹಬ್ಬವನ್ನು ಹಿಂದೂ ಧರ್ಮ ಗ್ರಂಥವಾದ ಭಗವದ್ಗೀತೆಯ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸುವ ಸಲುವಾಗು ಮಕ್ಕಳಿಗೆ ಭಗವದ್ಗೀತೆ ಪುಸ್ತಕವನ್ನು ನೀಡಿ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು.
ಈ ಸಂಭ್ರಮದಲ್ಲಿ ಮನೆಯವರು, ಕುಟುಂಬಸ್ಥರು, ಮಕ್ಕಳು ಭಾಗಿಯಾಗಿದ್ದರು.