ಸುರತ್ಕಲ್ : ಸ್ಪರ್ಶ ಕಲಾ ತಂಡದ ನವರಸ ಕಲಾವಿದೆರ್ ಅಭಿನಯದ ಈ ವರ್ಷದ ಹೊಸ ತುಳು ಸಾಮಾಜಿಕ ಹಾಸ್ಯಮಯ ನಾಟಕ “ಉಂದು ಎಡ್ಡೆ ಗತ್” ನಾಟಕದ ಶುಭ ಮೂಹೂರ್ತ ಇತ್ತೀಚೆಗೆ ಶ್ರೀ ಕ್ಷೇತ್ರ ನಲ್ಲೂರುನಲ್ಲಿ ನಡೆಯಿತು.
ಮೂಹೂರ್ತದ ಮೊದಲು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಟಕ ಯಶಸ್ವಿಗೆ ಪ್ರಾರ್ಥಿಸಲಾಯಿತು. ನಂತರ ಸುರತ್ಕಲ್ ಗೋವಿಂದದಾಸ ಕಾಲೇಜಿನ ಲಲಿತಾ ಕಲಾ ಅಧ್ಯಯನ ಕೇಂದ್ರದಲ್ಲಿ ನಾಟಕದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಪರ್ಶ ಕಲಾತಂಡದ ಗೌರವ ಅಧ್ಯಕ್ಷರಾದ ರಮೇಶ್ ಭಟ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ್ ಎಚ್. ಆಚಾರ್ಯ ಭಾಗವಹಿಸಿ ಶುಭ ಹಾರೈಸಿದರು. ನಾಟಕದ ನಿರ್ದೇಶಕರಾದ ಮಿಮಿಕ್ರಿ ಶರಣ್, ಚಲನಚಿತ್ರ ನಿರ್ದೇಶಕರಾದ ರಾಧಾಕೃಷ್ಣ ಉಡುಪಿ, ಚಲನಚಿತ್ರ ನಟ ಕೀತ್ ಫುರ್ಟಡೊ, ನಿಖಿಲ್ ಕುಂದರ್ ಗುಡ್ಡೆಕೊಪ್ಳ, ತಂಡದ ನಿರ್ಮಾಪಕರು ಅರುಣ್ ವಿ ಸುರತ್ಕಲ್, ಮನೀಶ್ ಡಿ.ಶೆಟ್ಟಿ, ತುಳುವ ಬೊಲ್ಪು ಸಂದೀಪ್ ಮಧ್ಯ, ಅವಿನಾಶ್ ಎಸ್ ಆಪ್ತ ಹಾಗೂ ಸಂಸ್ಥೆಯ ಸದಸ್ಯರು ಭಾಗವಹಿಸಿ ನಾಟಕಕ್ಕೆ ಶುಭ ಹಾರೈಸಿದರು.
ಈ ನಾಟಕ ಸಾಮಾಜಿಕ ಸಂದೇಶದೊಂದಿಗೆ ಹಾಸ್ಯಮಯ ಮನೋರಂಜನೆಯೊಂದಿಗೆ ಪ್ರೇಕ್ಷಕರನ್ನು ರಂಜಿಸುವ ನಿರೀಕ್ಷೆಯಿದೆ.
ಪ್ರದರ್ಶನಕ್ಕಾಗಿ ಸಂಪರ್ಕಿಸಿ: 9632714185, 7259730551

