ಹಿಮಾಲಯ ಬೇಬಿ ಕೇರ್‌ನಿಂದ ವಿಶಿಷ್ಟ ಡಿಜಿಟಲ್ ಅಭಿಯಾನ

0
22

ಶಿಶುಗಳ ಆರೈಕೆಗೆ ಸಮಗ್ರ ಪರಿಹಾರ ಒದಗಿಸುವುದು ನಮ್ಮ ಗುರಿ: ಚಕ್ರವರ್ತಿ ಎನ್.ವಿ.

ಮಂಗಳೂರು : ಪ್ರತಿಷ್ಠಿತ ಹಿಮಾಲಯ ಬೇಬಿ ಕೇರ್ ಸಂಸ್ಥೆಯು ಮಕ್ಕಳ ಆರಾಮದಾಯಕ ಮತ್ತು ಮೃದುವಾದ ಆರೈಕೆಗೆ ಒತ್ತು ನೀಡಲು ಜಾಗೃತಿ ಮೂಡಿಸುವ ವಿಶಿಷ್ಟ ಡಿಜಿಟಲ್ ಅಭಿಯಾನವನ್ನು ಬಿಡುಗಡೆ ಮಾಡಿದೆ.

ಈ ಅಭಿಯಾನದ ಮೂಲಕ ಬ್ರ್ಯಾಂಡ್ ತನ್ನ ಮೊಟ್ಟಮೊದಲ ಬೇಸಿಗೆಯ ಆರೈಕೆ ಕ್ರಮವನ್ನು ಪರಿಚಯಿಸಿದ್ದು, ಇದು ಬೇಸಿಗೆಯುದ್ದಕ್ಕೂ ಮಕ್ಕಳನ್ನು ತಂಪಾಗಿ, ತಾಜಾವಾಗಿ ಮತ್ತು ಸಂತೋಷದಿಂದ ಇಡಲು ನೆರವಾಗುವ ಆರೈಕೆ ಕ್ರಮವಾಗಿದೆ.

ಈ ಅಭಿಯಾನದಲ್ಲಿ ಕಂಪನಿಯ ಪ್ರಮುಖ ಉತ್ಪನ್ನಗಳಾದ ಜೆಂಟಲ್ ಬೇಬಿ ಶಾಂಪೂ, ರಿಫ್ರೆಶಿಂಗ್ ಬೇಬಿ ಸೋಪ್, ಜೆಂಟಲ್ ಬೇಬಿ ಪೌಡರ್ ಮತ್ತು ಜೆಂಟಲ್ ಬೇಬಿ ಸನ್‌ಸ್ಕ್ರೀನ್ ಲೋಷನ್ ಅನ್ನು ಪ್ರದರ್ಶಿಸಲಾಗಿದೆ. ಇವುಗಳನ್ನು ಬೇಸಿಗೆಯಲ್ಲಿ ಮೃದುವಾದ ಮತ್ತು ಪರಿಣಾಮಕಾರಿ ಆರೈಕೆ ನೀಡಲು ಬೇವು, ಲಾವಂಚ, ಕಲ್ಲಂಗಡಿ ಮತ್ತು ದಾಸವಾಳದಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದೆ.

ಈ ಅಭಿಯಾನದ ಕುರಿತು ಮಾತನಾಡಿದ ಹಿಮಾಲಯ ವೆಲ್‌ ನೆಸ್ ಸಂಸ್ಥೆಯ ಬೇಬಿಕೇರ್ ವಿಭಾಗದ ನಿರ್ದೇಶಕರಾದ ಚಕ್ರವರ್ತಿ ಎನ್.ವಿ. ಅವರು, “ಹಿಮಾಲಯ ಬೇಬಿ ಕೇರ್‌ನಲ್ಲಿ, ಹೊಸ ಪೀಳಿಗೆಯ ಪೋಷಕರ ಅಗತ್ಯತೆಗಳನ್ನು ಮೊದಲೇ ಗುರುತಿಸುವುದು ಮತ್ತು ಕೇವಲ ಪ್ರತ್ಯೇಕ ಉತ್ಪನ್ನಗಳನ್ನು ನೀಡುವುದರ ಹೊರತಾಗಿ ಸಮಗ್ರ ಪರಿಹಾರಗಳನ್ನು ರೂಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಬೇಸಿಗೆ ಸವಾಲುಗಳು ತೀವ್ರಗೊಳ್ಳುತ್ತಿರುವ ಕಾರಣ, ಮಕ್ಕಳ ಆರೈಕೆಗಾಗಿ ಹೆಚ್ಚು ಸಮಗ್ರವಾದ ಮತ್ತು ಕ್ರಮಬದ್ಧವಾದ ವಿಧಾನದ ಅಗತ್ಯವಿದೆ. ಈ ಅಭಿಯಾನದ ಮೂಲಕ ನಾವು ಕೇವಲ ಉತ್ಪನ್ನಗಳನ್ನು ಪರಿಚಯಿಸುತ್ತಿಲ್ಲ, ಬದಲಿಗೆ ಪೋಷಕರು ನಂಬಬಹುದಾದ ಸರಳ ಮತ್ತು ಪರಿಣಾಮಕಾರಿ ಬೇಸಿಗೆಯ ಆರೈಕೆ ಕ್ರಮವನ್ನು ರೂಪಿಸುತ್ತಿದ್ದೇವೆ” ಎಂದರು.

ಈ ಅಭಿಯಾನದ ಪ್ರಮುಖ ಆಕರ್ಷಣೆಯೆಂದರೆ, ಶಿಶುಗಳೇ ಮುಂಚೂಣಿಯಲ್ಲಿ ನಿಂತು ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿರುವಂತೆ ಬಿಂಬಿಸುವ ಒಂದು ಹಾಸ್ಯ ಪ್ರಧಾನ ಡಿಜಿಟಲ್ ಚಿತ್ರ. “ನಮಗೆ ದದ್ದುಗಳು ಬೇಡ” ಮತ್ತು “ಬೆವರಿನ ಕಿರಿಕಿರಿ ನಿಲ್ಲಿಸಿ” ಎಂದು ಬರೆದಿರುವ ಪುಟ್ಟ ಪ್ಲೇಕಾರ್ಡ್‌ ಗಳನ್ನು ಹಿಡಿದು ಮಕ್ಕಳು ಮೆರವಣಿಗೆ ನಡೆಸುತ್ತಿರುವ ದೃಶ್ಯಗಳು ಇದರಲ್ಲಿವೆ. ಮಕ್ಕಳಿಗೆ ಮಾತನಾಡಲು ಸಾಧ್ಯವಾದರೆ ಅವರು ಏನು ಹೇಳಬಹುದು ಎಂಬುದನ್ನು ಈ ವಿಡಿಯೋ ಅತ್ಯಂತ ಆಕರ್ಷಕವಾಗಿ ಮತ್ತು ಮನಮುಟ್ಟುವಂತೆ ಬಿಂಬಿಸಿದೆ. ನಂತರ, ಹಿಮಾಲಯ ಬೇಬಿ ಕೇರ್‌ ನ ಬೇಸಿಗೆಯ ಆರೈಕೆ ಕ್ರಮವನ್ನು ಪರಿಚಯಿಸುವುದರೊಂದಿಗೆ ಈ ಗೊಂದಲಗಳು ಶಾಂತವಾಗುತ್ತವೆ.

ಹೆಚ್ಚು ಪ್ರಾದೇಶಿಕ ಸಂಪರ್ಕ ಸಾಧಿಸಲು ಈ ಅಭಿಯಾನವನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಬೆಂಗಾಲಿ, ಒಡಿಯಾ, ಅಸ್ಸಾಮಿ ಮತ್ತು ಮರಾಠಿ ಸೇರಿದಂತೆ ಒಟ್ಟು 9 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಹಿಮಾಲಯ ಬೇಬಿ ಕೇರ್ ಪೋಷಕರ ವಿಶ್ವಾಸಾರ್ಹ ಪಾಲುದಾರನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

LEAVE A REPLY

Please enter your comment!
Please enter your name here