ಮೂಡುಬಿದಿರೆ : ಕಲ್ಲಬೆಟ್ಟಿನ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

0
64

ಪವನ್ ಗೌಡ ರಾಜ್ಯಕ್ಕೆ ಪ್ರಥಮ ರ‍್ಯಾಂಕ್

ಮೂಡುಬಿದಿರೆ : ತಾಲೂಕಿನ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೆಸಿಇಟಿ-2026 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ವಿದ್ಯಾರ್ಥಿ ಪವನ್ ಗೌಡ ಟಿ.ಕೆ. ಅವರು ಫುಡ್ ಸೈನ್ಸ್ (ಪ್ರಾಕ್ಟಿಕಲ್) ಹಾಗೂ ಅಗ್ರಿಕಲ್ಚರ್ (ಪ್ರಾಕ್ಟಿಕಲ್) ವಿಭಾಗಗಳಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಮತ್ತು ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 13ನೇ ರ‍್ಯಾಂಕ್ ಪಡೆದು ಅತ್ಯಪೂರ್ವ ವಿಶೇಷ ಸಾಧನೆ ಮಾಡಿದ್ದಾರೆ. ಆದಿತ್ಯ ಅನಿಲ್ ಕೆಂಚಣ್ಣಾವರ್ ಅವರು ಎಂಜಿನಿಯರಿಂಗ್ ವಿಭಾಗದಲ್ಲಿ 37ನೇ ರ‍್ಯಾಂಕ್ ಗಳಿಸಿರುತ್ತಾರೆ.

ಇವರು ಜೆಇಇ ಮೇನ್ಸ್ ನಲ್ಲಿ99.804 ಪರ್ಸೆಂಟೈಲ್ ಪಡೆದು ಮೂಡುಬಿದಿರೆ ತಾಲೂಕಿಗೆ ಪ್ರಥಮ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅತ್ಯತ್ತಮ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದರು. ಅಕ್ಷಯ್ ಡಿ. ಅವರು ವೆಟರಿನರಿ ಸೈನ್ಸ್‌ನಲ್ಲಿ 41ನೇ ರ‍್ಯಾಂಕ್ ಹಾಗೂ ನ್ಯಾಚುರೋಪಥಿ ವಿಭಾಗದಲ್ಲಿ 355ನೇ ರ‍್ಯಾಂಕ್ , ಮನ್ವಿತ್ ಎಸ್. ಪದ್ಮಾಶಾಲಿ ಅವರು ಫುಡ್ ಸೈನ್ಸ್‌ನಲ್ಲಿ 86ನೇ ರ‍್ಯಾಂಕ್, ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 86ನೇ ರ‍್ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 347ನೇ ರ‍್ಯಾಂಕ್ ಗಳಿಸಿದ್ದಾರೆ.

ಶಮಿತ್ ಪಿ. ಗೌಡ ಅವರು ವೆಟರಿನರಿ ಸೈನ್ಸ್‌ನಲ್ಲಿ 133ನೇ ರ‍್ಯಾಂಕ್ ಮತ್ತು ನ್ಯಾಚುರೋಪಥಿಯಲ್ಲಿ 478ನೇ ರ‍್ಯಾಂಕ್ ಪಡೆದಿದ್ದಾರೆ. ಕಿಶನ್ ಶಿವಮೂರ್ತಯ್ಯ ಮಟದ್ ಅವರು ಫುಡ್ ಸೈನ್ಸ್‌ನಲ್ಲಿ 170ನೇ ರ‍್ಯಾಂಕ್ , ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 170ನೇ ರ‍್ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 529ನೇ ರ‍್ಯಾಂಕ್, ದಿಗಂತ್ ಬಿ.ಹೆಚ್. ಅವರು ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 222ನೇ ರ‍್ಯಾಂಕ್, ಧನುಷ್ ಗುತ್ತಿ ಎಂಜಿನಿಯರಿಂಗ್ ವಿಭಾಗದಲ್ಲಿ 290ನೇ ರ‍್ಯಾಂಕ್ ಮತ್ತು ಪಿಯು ಬೋರ್ಡ್ ಪರೀಕ್ಷೆಯಲ್ಲಿ 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದರು.

ಬಿ. ವಿನಯ್ ಅವರು ಫುಡ್ ಸೈನ್ಸ್‌ನಲ್ಲಿ 396ನೇ ರ‍್ಯಾಂಕ್ , ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 396ನೇ ರ‍್ಯಾಂಕ್ ಮತ್ತು ವೆಟರಿನರಿ ಸೈನ್ಸ್‌ನಲ್ಲಿ 925ನೇ ರ‍್ಯಾಂಕ್, ಜೇಂಕರ್ ಎಂ. ಎಂಜಿನಿಯರಿಂಗ್‌ನಲ್ಲಿ 449ನೇ ರ‍್ಯಾಂಕ್ , ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 467ನೇ ರ‍್ಯಾಂಕ್ ಹಾಗೂ ಫುಡ್ ಸೈನ್ಸ್‌ನಲ್ಲಿ 467ನೇ ರ‍್ಯಾಂಕ್ , ವಿಜಯ್ ರಾಮಲಿಂಗಪ್ಪ ಕೆ. ಅವರು ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 500ನೇ ರ‍್ಯಾಂಕ್, ತೇಜಸ್ ಡಿ ಎಂ. ವೆಟರಿನರಿ ಸೈನ್ಸ್ ವಿಭಾಗದಲ್ಲಿ 516ನೇ ರ‍್ಯಾಂಕ್ , ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 879ನೇ ರ‍್ಯಾಂಕ್ ಹಾಗೂ ಫುಡ್ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 879ನೇ ರ‍್ಯಾಂಕ್ , ಶ್ರೇಯಸ್ ಯು. ಶಾನುಭೋಗ್ ಅವರು ವೆಟರಿನರಿ ಸೈನ್ಸ್‌ನಲ್ಲಿ 531ನೇ ರ‍್ಯಾಂಕ್ ಹಾಗೂ ಫುಡ್ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 531ನೇ ರ‍್ಯಾಂಕ್ ಆದಿತ್ಯ ಸಿ. ಪಾಟೀಲ್ ನ್ಯಾಚುರೋಪಥಿಯಲ್ಲಿ 581ನೇ ರ‍್ಯಾಂಕ್ ಮತ್ತು ವೆಟರಿನರಿ ಸೈನ್ಸ್‌ನಲ್ಲಿ 929ನೇ ರ‍್ಯಾಂಕ್,. ಭಾರದ್ವಾಜ್ ಪಿ.ಯು. ಅವರು ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 681ನೇ ರ‍್ಯಾಂಕ್ ಹಾಗೂ ಫುಡ್ ಸೈನ್ಸ್‌ನಲ್ಲಿ 681ನೇ ರ‍್ಯಾಂಕ್, ಶ್ರೀಗೌರಿ ಟಿ.ಎಂ. ವೆಟರಿನರಿ ಸೈನ್ಸ್‌ನಲ್ಲಿ 720ನೇ ರ‍್ಯಾಂಕ್ , ಅನುಷಾ ಓಮಣ್ಣ ಚಲವಾದಿ ಫುಡ್ ಸೈನ್ಸ್‌ನಲ್ಲಿ 835ನೇ ರ‍್ಯಾಂಕ್ ಮತ್ತು ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 835ನೇ ರ‍್ಯಾಂಕ್ , ಪ್ರೀತಮ್ ಎಚ್.ಎಂ. ನ್ಯಾಚುರೋಪಥಿಯಲ್ಲಿ 821ನೇ ರ‍್ಯಾಂಕ್ , ಯಶಸ್ ರೆಡ್ಡಿ ಅವರು ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 844ನೇ ರ‍್ಯಾಂಕ್ , ಹರ್ಷಿತಾ ಸಿ. ವೆಟರಿನರಿ ಸೈನ್ಸ್‌ನಲ್ಲಿ 848ನೇ ರ‍್ಯಾಂಕ್ ಹಾಗೂ ಮಿಥುನ್ ಎಚ್.ಪಿ. ವೆಟರಿನರಿ ಸೈನ್ಸ್‌ನಲ್ಲಿ 966ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದ್ದು, ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ ಹಾಗೂ ಕಾಲೇಜಿನ ಗುಣಮಟ್ಟದ ತರಬೇತಿಯೇ ಈ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here