ಮೂಡುಬಿದಿರೆ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು 2025-26 ನೇ ಸಾಲಿನ ಹಾಲು ಮತ್ತು ಹಾಲಿನ ಉತ್ಪನಗಳ ಮಾರಾಟದಲ್ಲಿ ಮಂಗಳೂರು ತಾಲ್ಲೂಕು ಮಟ್ಟದ ನಗರ ಪ್ರದೇಶದ ಅತ್ಯುತ್ತಮ ಡೀಲರ್ ಆಗಿ ಗುರುತಿಸಿ ದ್ವಿತೀಯಸ್ಥಾನವನ್ನು ಪಡೆದ ಬೆಳುವಾಯಿ ಸಿ ಎ ಬ್ಯಾಂಕ್ ಉಪಾಧ್ಯಕ್ಷೆ ಮೂಡುಬಿದಿರೆ ನಗರದಲ್ಲಿ ನಂದಿನಿ ಹಾಲಿನ ಮಾರಾಟ ಮಳೆಗೆಯನ್ನು ಹೊಂದಿರುವ ಉಷಾ ದಯಾನಂದ ಪೈ ಯವರನ್ನು ಕುಲಶೇಖರದ
ಸೂರ್ಯನಾರಾಯಣ ದೇವಸ್ಥಾನದ ಸಭಾoಗಣದಲ್ಲಿ ನಡೆದ ಸಮಾರಂಭದಲ್ಲಿ ಒಕ್ಕೂಟದ ವತಿಯಿಂದ ಗೌರವಿಸಿ ಪ್ರಶಸ್ತಿ ಪತ್ರ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಒಕ್ಕೂಟದ ಅಧ್ಯಕ್ಷ ರವಿರಾಜಹೆಗ್ಡೆ,ಉಪಾಧ್ಯಕ್ಷರಾದಉದಯ ಎಸ್ ಕೋಟ್ಯಾನ್, ನಿರ್ದೇಶಕರುಗಳಾದ ನಂದರಾಮ ರೈ, ಕೆ.ಪಿ ಸುಚರಿತ ಶೆಟ್ಟಿ, ಸುಧಾಕರ ರೈ, ಸವಿತಾ ಎನ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಜೆ.ಜೈಕುಮಾರ್,ಜಾನೆಟ್ ರೊಸಾರಿಯೋ ಉಪಸ್ಥಿತರಿದ್ದರು. ಸುಚಿತ್ರ ನಿರೂಪಿಸಿದರು.

