ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಆಗ್ರಹ.

0
229

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಸಂವಾದ ಸಭೆ ನಡೆಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಮನವಿಸಲ್ಲಿಸಿದ್ದಾರೆ.

ಅರಣ್ಯ ಹಕ್ಕು ಮಾನ್ಯತೆ ನಿಯಮಗಳಿಗೆ 2012ರಲ್ಲಿ ತರಲಾದ ತಿದ್ದುಪಡಿಯ ಅಂಶಗಳು, ಗುಜರಾತ ಉಚ್ಛ ನ್ಯಾಯಾಲಯದ ತೀರ್ಪು,ಕೇಂದ್ರ ಬುಡಕಟ್ಟು ಮಂತ್ರಾಲಯದ 2014ರ ನಿರ್ದೆಶನ ಸಹಿತ ವಿವಿಧ ಅಂಶಗಳನ್ನು ಪರಿಗಣಿಸಿ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಮೂಲಕ ಅರಣ್ಯ ಹಕ್ಕುಕಾಯ್ದೆಯ ಪರಿಣಾಮ ಕಾರಿ ಅನುಷ್ಠಾನದಿಂದ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವವರಿಗೆ ಭೂಮಿಯ ಹಕ್ಕು ನೀಡಲು ರಾಜ್ಯ ಸರ್ಕಾರ ಇಚ್ಚಾಶಕ್ತಿ ತೋರಬೇಕು. ಈ ದಿಶೆಯಲ್ಲಿ ರಾಜ್ಯ ಸರ್ಕಾರದಿಂದ ಸಂವಾದ ಸಭೆಯೊಂದನ್ನು ಆಯೋಜಿಸಿ ಕಾಯ್ದೆಯ ಅನುಷ್ಝಾನ ಪ್ರಕ್ರೀಯೆಯಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ಮುಖ್ಯಮಂತ್ರಿಗಳು ಮದ್ಯಪ್ರವೇಶ ಮಾಡಬೇಕು ಎಂದು ತಿಳಿಸಿದ್ದಾರೆ.

ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ, ಉತ್ತರಕನ್ನಡ ಜಿಲ್ಲೆಯ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಮತ್ತು ಜಿಲ್ಲಾ ವೇದಿಕೆ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಉನ್ನತಾಧಿಕಾರ ಮಟ್ಟದ ಸಭೆ ಆಯೋಜಿಸಿ, ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನ ಪ್ರಕ್ರೀಯೆಯಲ್ಲಿನ ಇತರ ಪಾರಂಪರಿಕ ಅರಣ್ಯವಾಸಿ ವ್ಯಾಖ್ಯೆಯ ಬಗೆಗಿನ ಮೂರುತಲೆಮಾರಿನ ಶರತ್ತಿನ ವಿವಾದದ ಗೊಂದಲವನ್ನು ಬಗೆಹರಿಸಬೇಕು. 2005ರ ಪೂರ್ವದ ನೈಜ ಸಾಗುವಳಿಯನ್ನು ಗುರುತಿಸಲು ಅಗತ್ಯ ಸಮೀಕ್ಷೆ ನಡೆಸುವದು ಸೇರಿದಂತೆ ವಿವಿಧ ನಾಲ್ಕು ಪ್ರಮುಖ ಅಂಶಗಳನ್ನು ಪರಿಗಣಿಸಿ ಜಿಲ್ಲೆಯ ಜನರಿಗೆ ಅರಣ್ಯಹಕ್ಕು ಮಾನ್ಯತಾ ಕಾಯ್ದೆಯ ಗರಿಷ್ಠ ಸೌಲಭ್ಯ ದೊರಕಿಸಿಕೊಡಲು ಇಚ್ಛಾಶಕ್ತಿ ತೋರುವ ಕೆಲಸ ಸರ್ಕಾರದಿಂದ ಆಗಬೇಕು ಎನ್ನುವ ಅಂಶಗಳನ್ನು ಕೊಚರೇಕರ ಅವರು ಮುಖ್ಯಮಂತ್ರಿಗಳ ಗಮನಸೆಳೆದಿದ್ದ್ದಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಆಗಬೇಕೆಂದು ಅವರು ಕೋರಿದ್ದಾರೆ.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಬೇಡಿಕೆಗಳನ್ನು ಪರಿಶೀಲಿಸಿ ಅರಣ್ಯವಾಸಿಗಳ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವದಾಗಿ ಮುಖ್ಯಮಂತ್ರಿಗಳು ತಮಗೆ ಭರವಸೆ ನೀಡಿದ್ದಾರೆ.ಅಧಿಕಾರಿಗಳು ಸ್ಪಂದಿಸಿದರೆ ಮುಂದಿನ ದಿನಗಳಲ್ಲಿ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಜಿಲ್ಲೆಯ ಜನರ ಈ ಪ್ರಮುಖ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಚಂದ್ರಕಾಂತ ಕೊಚರೇಕರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here