ಮನುಕುಲದ ಚ್ಯಾರಿತ್ರವನ್ನು ಶ್ರೀಮಂತಗೊಳಿಸಿದ ವಚನ ಸಾಹಿತ್ಯ: ಭರಮಪ್ಪ ಮೈಸೂರು

0
135

ದಾವಣಗೆರೆ: ಜಗತ್ತಿನ ಇತಿಹಾಸದಲ್ಲಿ ಮನುಕುಲದ ವ್ಯಕ್ತಿತ್ವಕ್ಕೆ ಮಹತ್ವ ನೀಡಿ ಮನುಕುಲದ ಚ್ಯಾರಿತ್ರವನ್ನು ಶ್ರೀಮಂತಗೊಳಿಸಿ ಸಮ ಸಮಾಜವನ್ನು ನಿರ್ಮಾಣ ಮಾಡಿದ ಏಕೈಕ ಸಾಹಿತ್ಯ ವಚನ ಸಾಹಿತ್ಯವೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಭರಮಪ್ಪ ಮೈಸೂರು ಅಭಿಪ್ರಾಯ ಪಟ್ಟರು.
ನಗರದ ಜೆ.ಹೆಚ್. ಪಟೇಲ್ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಲಿಂ.ಶರಣೆ ಬಸಮ್ಮ ಮತ್ತು ಬುಳ್ಳಾಪುರದ ಸಿದ್ದಪ್ಪ ದತ್ತಿ ಮತ್ತು ಶರಣ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
೧೨ನೇ ಶತಮಾನದಲ್ಲಿ ಜನಸಾಮನ್ಯರು ಕರ್ಮಸಿದ್ದಾಂತದ ಫಲವಾಗಿ ಗುಲಾಮಿ ವ್ಯಕ್ತಿತ್ವವನ್ನು ರೂಡಿಸಿಕೊಂಡು ದಮನೀಯ ಬದುಕನ್ನು ಸಾಗಿಸುತ್ತಿದ್ದರು. ಬಸವಾದಿ ಶರಣರು ತಮ್ಮ ಅಮೂಲ್ಯವಾದ ವಚನಗಳ ಮೂಲಕ ಎಲ್ಲಾ ವರ್ಗದ ಜನರನ್ನು ಕರ್ಮಸಿದ್ದಾಂತದಿಂದ ಮುಕ್ತಗೊಳಿಸಿ ಕಾಯಕ ಸಿದ್ದಾಂತದ ಮೂಲಕ ಸ್ವಾವಲಂಬಿ ವ್ಯಕಿತ್ವವನ್ನು ರೂಪಿಸುವ ಮೂಲಕ ಶಾಂತಿಯುತ ಸಮ ಸಮಾಜವನ್ನು ನಿರ್ಮಿಸಿದರು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶಪಾಲರಾದ ಜೋತಿ.ಎ. ನೆರವೇರಿಸಿದರು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ್ದ ಕೆ.ಬಿ.ಪರಮೇಶ್ವರಪ್ಪ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ೧೨ ನೇ ಶತಮಾನದ ಶರಣರ ಮೌಲ್ಯಗಳನ್ನು ಜನಮಾನಸದಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಹರಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಮಮತಾ ನಾಗರಾಜ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪರಮೇಶ್ವರಪ್ಪ. ಎಂ. ಸಿರಿಗೆರೆ, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ, ಪುಷ್ಪ ಮಲ್ಲಿಕಾರ್ಜುನಸ್ವಾಮಿ, ನಿವiðಲ ಶಿವಕುಮಾರ್, ಆರ್.ಸಿದ್ದೇಶಪ್ಪ, ಜಿ.ಎಂ.ಕುಮಾರಪ್ಪ, ಬಿ.ಟಿ.ಪ್ರಕಾಶ್, ವಿನೋದ ಅಜಗಣ್ಣನವರ್, ಎನ್.ಟಿ. ಸಣ್ಣಮಂಜುನಾಥ, ಮುಸ್ತಾಫ್, ಕರಿಬಸಪ್ಪ ಮುಂತಾದವರು ಭಾಗವಹಿಸಿದ್ದರು. ಚೇತನ.ಹೆಚ್. ಸರ್ವರನ್ನು ಸ್ವಾಗಿಸಿದರು, ದೀಪಾ ಚಿನ್ನಿಕಟ್ಟೆ ವಂದಿಸಿದರು. ಶೈಲಾ.ಎನ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here