ವಚನಗಳು ಜೀವನ ಸ್ಪೂರ್ತಿಯ ಸೆಲೆಗಳು : ಭರಮಪ್ಪ ಮೈಸೂರು

0
25

12ನೇ ಶತಮಾನದ ಬಸವಾದಿ ಶರಣರ ವಚನಗಳು ಜೀವನ ಸ್ಪೂರ್ತಿಯ ಸೆಲೆಗಳಾಗಿವೆ. ಮಾನವೀಯ ಮೌಲ್ಯಗಳಿಂದ ಮನುಕುಲವನ್ನು ವಿಶ್ವಮಾನವ ದರ್ಜೆಗೆ ಏರಿಸುವಲ್ಲಿ ಸಹಕಾರಿಯಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಭರಮಪ್ಪ ಮೈಸೂರು ತಿಳಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಲಿಂ. ಬರಮಮ್ಮ ಮತ್ತು ಲಿಂ. ಎನ್.ಟಿ ಸಿದ್ಧಪ್ಪನವರ ದತ್ತಿ ಕಾರ್ಯಕ್ರಮ, ಮತ್ತು ಶರಣ ಚಿಂತನ ಗೋಷ್ಠಿಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಇಂದಿನ ಯುವಪೀಳಿಗೆ ಆದರ್ಶಗಳು,ಜೀವನ ಮೌಲ್ಯಗಳ ಕೊರತೆಯಿಂದಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಇಂತಹ ಕಾಲದಲ್ಲಿ ಶರಣರ ವಚನಗಳು ಸಮಾಜಕ್ಕೆ ಮತ್ತು ಯುವಕರಿಗೆ ಉತ್ತಮ ಜೀವನ ಸಾಗಿಸಲು ಕೈದಿವಿಗೆಯಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಶರಣ ಕೆ. ಬಿ. ಪರಮೇಶ್ವರಪ್ಪನವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು 12ನೇ ಶತಮಾನದ ಶರಣರ ವಚನಗಳಲ್ಲಿರುವ ಮೌಲ್ಯಗಳು ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿವೆ ಎಂದು ತಿಳಿಸಿದರು.

ತ್ತಿ ದಾನಿಗಳಾದ ಶರಣ ಎನ್.ಟಿ ಸಣ್ಣ ಮಂಜುನಾಥ ಅವರು ನಮ್ಮ ತಂದೆ ತಾಯಿ ಹೆಸರಲ್ಲಿಟ್ಟಿರುವ ದತ್ತಿ 12ನೇ ಶತಮಾನದ ಶರಣರ ವಚನಗಳನ್ನು ಪುನರ್ಮನನ ಮಾಡಿಕೊಳ್ಳುವಲ್ಲಿ ಸಾರ್ಥಕತೆ ಪಡೆದಿದೆ ಎಂದು ತಿಳಿಸಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶರಣಿ ನಿರ್ಮಲ ಶಿವಕುಮಾರವರು ಆಧುನಿಕ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸುವಲ್ಲಿ ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ. ಟಿ ಇವರು ವಿದ್ಯಾರ್ಥಿಗಳು ಶರಣ ಸಾಹಿತ್ಯದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬೇಕೆಂದು ಸಲೆಹೆ ನೀಡಿದರು . ನಮ್ಮ ಕಾಲೇಜಿನಲ್ಲಿ ದತ್ತಿ ಕಾರ್ಯಕ್ರಮ ಏರ್ಪಡಿಸಿ ನಮ್ಮ ಮಕ್ಕಳಿಗೆ ಶರಣ ಸಾಹಿತ್ಯದ ಅಭಿರುಚಿ ಬೆಳೆಸಿದ್ದಕ್ಕಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿಗೆ ಅಭಿನಂದನೆ ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೋಭಾ ಸಾಹುಕಾರ್ ಅವರು ವಚನ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೆಯಿತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಮುದೇಗೌಡರು ನಾಗರಾಜ್ ನಿವೃತ್ತ ಶಿಕ್ಷಕರು ತಮ್ಮ ತಂದೆ ತಾಯಿ ಹಾಗೂ ಅತ್ತೆ ಮಾವನವರ ಹೆಸರಿನಲ್ಲಿ 50,000 ರೂಗಳ ದತ್ತಿಯನ್ನು ಇರಿಸಿದರು. ಡಾ. ಎನ್.ಟಿ ಮರಳ ಸಿದ್ದಪ್ಪನವರು ದತ್ತಿ ಪರಿಚಯ ಮಾಡಿದರು.ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ನಯನ ಮತ್ತು ನೇತ್ರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಕುಮಾರ್.ಎಂ.ಇವರು ಸರ್ವರನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಸಿದ್ದಲಿಂಗಮ್ಮ ಬಿ. ಜಿ. ಇವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶರಣ ಆರ್. ಸಿದ್ದೇಶಪ್ಪ ಶರಣ ಬಿ. ಟಿ. ಪ್ರಕಾಶ್ ಮತ್ತು ಹರಿಹರ ತಾಲ್ಲುಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವಾಜಿ ಪಾಟೀಲ್,ಟಿ ತಿಪ್ಪೇಸ್ವಾಮಿ,ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಚನ ಮಂಗಲದೊAದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

12ನೇ ಶತಮಾನದ ಬಸವಾದಿ ಶರಣರ ವಚನಗಳು ಜೀವನ ಸ್ಪೂರ್ತಿಯ ಸೆಲೆಗಳಾಗಿವೆ. ಮಾನವೀಯ ಮೌಲ್ಯಗಳಿಂದ ಮನುಕುಲವನ್ನು ವಿಶ್ವಮಾನವ ದರ್ಜೆಗೆ ಏರಿಸುವಲ್ಲಿ ಸಹಕಾರಿಯಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಭರಮಪ್ಪ ಮೈಸೂರು ತಿಳಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಲಿಂ. ಬರಮಮ್ಮ ಮತ್ತು ಲಿಂ. ಎನ್.ಟಿ ಸಿದ್ಧಪ್ಪನವರ ದತ್ತಿ ಕಾರ್ಯಕ್ರಮ, ಮತ್ತು ಶರಣ ಚಿಂತನ ಗೋಷ್ಠಿಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಇಂದಿನ ಯುವಪೀಳಿಗೆ ಆದರ್ಶಗಳು,ಜೀವನ ಮೌಲ್ಯಗಳ ಕೊರತೆಯಿಂದಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕಾಲದಲ್ಲಿ ಶರಣರ ವಚನಗಳು ಸಮಾಜಕ್ಕೆ ಮತ್ತು ಯುವಕರಿಗೆ ಉತ್ತಮ ಜೀವನ ಸಾಗಿಸಲು ಕೈದಿವಿಗೆಯಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಶರಣ ಕೆ. ಬಿ. ಪರಮೇಶ್ವರಪ್ಪನವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು 12ನೇ ಶತಮಾನದ ಶರಣರ ವಚನಗಳಲ್ಲಿರುವ ಮೌಲ್ಯಗಳು ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿವೆ ಎಂದು ತಿಳಿಸಿದರು. ದತ್ತಿ ದಾನಿಗಳಾದ ಶರಣ ಎನ್.ಟಿ ಸಣ್ಣ ಮಂಜುನಾಥ ಅವರು ನಮ್ಮ ತಂದೆ ತಾಯಿ ಹೆಸರಲ್ಲಿಟ್ಟಿರುವ ದತ್ತಿ 12ನೇ ಶತಮಾನದ ಶರಣರ ವಚನಗಳನ್ನು ಪುನರ್ಮನನ ಮಾಡಿಕೊಳ್ಳುವಲ್ಲಿ ಸಾರ್ಥಕತೆ ಪಡೆದಿದೆ ಎಂದು ತಿಳಿಸಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶರಣಿ ನಿರ್ಮಲ ಶಿವಕುಮಾರವರು ಆಧುನಿಕ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸುವಲ್ಲಿ ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ. ಟಿ ಇವರು ವಿದ್ಯಾರ್ಥಿಗಳು ಶರಣ ಸಾಹಿತ್ಯದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬೇಕೆಂದು ಸಲೆಹೆ ನೀಡಿದರು . ನಮ್ಮ ಕಾಲೇಜಿನಲ್ಲಿ ದತ್ತಿ ಕಾರ್ಯಕ್ರಮ ಏರ್ಪಡಿಸಿ ನಮ್ಮ ಮಕ್ಕಳಿಗೆ ಶರಣ ಸಾಹಿತ್ಯದ ಅಭಿರುಚಿ ಬೆಳೆಸಿದ್ದಕ್ಕಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿಗೆ ಅಭಿನಂದನೆ ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೋಭಾ ಸಾಹುಕಾರ್ ಅವರು ವಚನ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೆಯಿತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮುದೇಗೌಡರು ನಾಗರಾಜ್ ನಿವೃತ್ತ ಶಿಕ್ಷಕರು ತಮ್ಮ ತಂದೆ ತಾಯಿ ಹಾಗೂ ಅತ್ತೆ ಮಾವನವರ ಹೆಸರಿನಲ್ಲಿ 50,000 ರೂಗಳ ದತ್ತಿಯನ್ನು ಇರಿಸಿದರು. ಡಾ. ಎನ್.ಟಿ ಮರಳ ಸಿದ್ದಪ್ಪನವರು ದತ್ತಿ ಪರಿಚಯ ಮಾಡಿದರು.ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ನಯನ ಮತ್ತು ನೇತ್ರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಕುಮಾರ್.ಎಂ.ಇವರು ಸರ್ವರನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಸಿದ್ದಲಿಂಗಮ್ಮ ಬಿ. ಜಿ. ಇವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶರಣ ಆರ್. ಸಿದ್ದೇಶಪ್ಪ ಶರಣ ಬಿ. ಟಿ. ಪ್ರಕಾಶ್ ಮತ್ತು ಹರಿಹರ ತಾಲ್ಲುಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವಾಜಿ ಪಾಟೀಲ್,ಟಿ ತಿಪ್ಪೇಸ್ವಾಮಿ,ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಚನ ಮಂಗಲದೊAದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.