ಹರಿಣಾಕ್ಷಿ ಮುರುವ ಅಧ್ಯಕ್ಷರಾಗಿ ಆಯ್ಕೆ
ದೇಂತಡ್ಕ : ದೇಂತಡ್ಕದ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಭೆಯು ಜುಲೈ 19ರಂದು ಬೆಳಿಗ್ಗೆ 10 ಗಂಟೆಗೆ ಕ್ಷೇತ್ರದಲ್ಲಿ ನಡೆಯಿತು. ಸಭೆಯಲ್ಲಿ ಆಗಸ್ಟ್ 28, 2026ರಂದು ನಡೆಯಲಿರುವ ವರಮಹಾಲಕ್ಷ್ಮಿ ಪೂಜೆಯ ಯಶಸ್ವಿ ಆಯೋಜನೆಗಾಗಿ ನೂತನ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಹರಿಣಾಕ್ಷಿ ಮುರುವ ಹಾಗೂ ಉಪಾಧ್ಯಕ್ಷರಾಗಿ ತಾರಾ ವಿಶ್ವನಾಥ್ ಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೆ, ಸುಮಾರು 50 ಮಂದಿ ಸದಸ್ಯರನ್ನು ಸಮಿತಿಗೆ ಸೇರ್ಪಡೆಗೊಳಿಸಲಾಯಿತು.
ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾದ ಶಾಮನಾರಾಯಣ್ ಜೆ, ಗಿರೀಶ್ ಶಂಕರ್ ಕೈಲಾರ್ ಹಾಗೂ ಅನಂತ ಕೃಷ್ಣ ಮುರುಗಾಜೆ ಅವರ ಮಾರ್ಗದರ್ಶನ ಮತ್ತು ಹಿರಿತನದಲ್ಲಿ ಸಮಿತಿ ರಚನೆಗೊಂಡಿತು.
ಸಭೆಯಲ್ಲಿ ಪೂಜಾ ಮಹೋತ್ಸವವನ್ನು ಭಕ್ತಿಭಾವದಿಂದ ಹಾಗೂ ಅಚ್ಚುಕಟ್ಟಾಗಿ ನಡೆಸುವ ಕುರಿತು ಚರ್ಚಿಸಿ, ವಿವಿಧ ಜವಾಬ್ದಾರಿಗಳನ್ನು ಸದಸ್ಯರಿಗೆ ಹಂಚಿಕೆ ಮಾಡಲಾಯಿತು. ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

