ಸತತ 5 ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಸಂಪನ್ನ

0
7

ಬ್ರಹ್ಮಾವರ : ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಸತತ 5 ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಬ್ರಹ್ಮಾವರ ಶ್ರೀ ದೇವಿ ಪಿಯೂಷ್ ದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಸ.ರಿ.ಗ.ಮ.ಪ ಖ್ಯಾತಿಯ ವ್ರದ್ದಿ ಕೊಳಂಬೆ ಇವರನ್ನು ಸನ್ಮಾನಿಸಲಾಯಿತು. ಹಾಗೂ ಶೈನ್ ಬ್ರೈಟ್ ಇವರು ನೆಡೆಸಿದ ಉಚಿತ ತರಬೇತಿಯಲ್ಲಿ ಶಿಕ್ಷಣ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಶೈನ್ ಬ್ರೈಟ್ ಸಂಸ್ಥೆಯ ಸಂಚಾಲಕಿ ಶೈನಾ ಮೋವಿಸ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವೇದಿಕೆಯ ಸಂಚಾಲಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ ಪೂಜಾರಿ, ಅಧ್ಯಕ್ಷರಾದ ಕುಸುಮ ಮನೋಜ್, ಕಾರ್ಯದರ್ಶಿ ನೈನಾ ಜೆ ಶೆಟ್ಟಿ.,ಗೌರವ ಅಧ್ಯಕ್ಷರಾದ ಮಮತಾ ಶೆಟ್ಟಿ.ಜ್ಯೋತಿ ಶೆಟ್ಟಿ, ಸವಿತಾ ಜೋಗಿ, ಭಾರತಿ ದಿನೇಶ್ ರಾವ್ ಗೀತಾ ಶೆಟ್ಟಿ ,ಶಶಿಕಲಾ,ಪ್ರೀತಿ. ಶುಭ ಲಕ್ಷ್ಮೀ , ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಕೆ‌.ಪೂಜಾರಿ.ನ್ಯಾಯವಾದಿ ಮೇಘನಾ ಶೆಟ್ಟಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.