ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ 2026-28ನೇ ನೂತನ ಅಧ್ಯಕ್ಷರಾಗಿ ವಾಸುದೇವ ಎಲ್.ರಾಯ್ಕರ್ ರವರು ಇತ್ತೀಚೆಗೆ ನಡೆದ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಮಾಡಿದರು.
ಗೌರವ ಅಧ್ಯಕ್ಷರಾಗಿ ಕೆ.ಹೆಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಖಜಾಂಚಿಯಾಗಿ ಎಂ.ಎಸ್.ಪ್ರಸಾದ್, ಉಪಾಧ್ಯಕ್ಷರಾಗಿ ವಿಜಯ್‌ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾಗಿ ರಾಜಶೇಖರ್ ಬೆನ್ನೂರು, ಡಿ.ಹೆಚ್.ಚನ್ನಬಸಪ್ಪ, ಅಬ್ದುಲ್ ಸತ್ತಾರ್ ಸಾಹೇಬ್, ಶಾಂತಪ್ಪ ಪೂಜಾರಿ, ಎಸ್.ಶಿವನಪ್ಪ, ಕಛೇರಿ ಕಾರ್ಯದರ್ಶಿಯಾಗಿ ವಿ.ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಈ ಮಹಾಸಭೆಗೆ ಕೆ.ಸಿ.ಉಮೇಶ್ ಸ್ವಾಗತ ಮಾಡಿ ನಿರೂಪಣೆ ಮಾಡಿದರು ಕೊನೆಯಲ್ಲಿ ಎಂ.ಎಸ್.ಪ್ರಸಾದ್ ವಂದಿಸಿದರು.

