ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ; ವಾರ್ಷಿಕ ಸಾಮಾನ್ಯ ಸಭೆ

0
156

ಕಲ್ಲಡ್ಕ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ನಿಯಮಿತ ಇದರ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ವಿರಪ್ಪ ಮೂಲ್ಯ ಬೆತ್ತಸರವು ರವರ ಅಧ್ಯಕ್ಷತೆಯಲ್ಲಿ ವೀರಕಂಭ ಮಜಿ ಶಾಲಾ ಸಭಾಭವನದಲ್ಲಿ ರವಿವಾರ ಜರಗಿತು.
ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲು ಎರಡು ದಿನದ ಹಿಂದೆ ನಿಧನರಾದ ಸಂಘದ ನಿರ್ದೇಶಕ ಪದ್ಮನಾಭ ಬಂಗೇರ ಮಜಿ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ ಸಂಘದ ಸದಸ್ಯರಿಗೆ 15 ಶೇಕಡ ಡಿವಿಡೆಂಟ್ ಘೋಷಿಸಿದರು. ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಮೇವು ಕೃಷಿ ಮಾಡಿ ಯಾವ ರೀತಿಯಲ್ಲಿ ಲಾಭದಾಯಕವಾಗಿ ಹೈನುಗಾರಿಕೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಟ್ಲ ವಲಯ ವಿಸ್ತರಣಾಧಿಕಾರಿ ಪ್ರಫುಲ್ಲ ಪಿ.ಎ. ಹಾಲು ಪೂರೈಸುವ ರೈತರ ಜವಾಬ್ದಾರಿ, ಸಂಘ ಲಾಭದಾಯಕವಾಗಲು ಸದಸ್ಯರು ನಿರ್ವಹಿಸುವ ಕಾರ್ಯಗಳ ಬಗ್ಗೆ, ಹಾಗೂ ಪ್ರಸ್ತುತ ಸಂಘದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ 80 ಶೇಕಡ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗುರುತಿಸಿ ಪುರಸ್ಕರಿಸಲಾಯಿತು. ಸಂಘಕ್ಕೆ ಹಾಲು ಪೂರೈಸುತ್ತಿರುವ ಸದಸ್ಯರಿಗೆ ಸ್ಟೀಲ್ ಬಾಲ್ದಿ ಉಡುಗೊರೆಯಾಗಿ ನೀಡಲಾಯಿತು.
ಸಂಘದ ನಿರ್ದೇಶಕರುಗಳಾದ ನಾರಾಯಣ ಮೂಲ್ಯ ಬೆತ್ತಸರವು, ಜಯಶೀಲ ಆಳ್ವ, ಪದ್ಮನಾಭ ಗೌಡ ಮೈರ, ಉಮೇಶ್ ಎನ್ ಮಜಿ, ಉಮಾವತಿ ಮಜಿ, ಸುನಂದ, ಕೇಶವ ನಾಯಕ ಕೆಮ್ಮಟೆ, ಆನಂದ ಮೂಲ್ಯ ಮೈರಾ, ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಬಂಗೇರ ಸಂಘದ ವಾರ್ಷಿಕ ವರದಿ ವಾಚಿಸಿದರು. ಹಾಲು ಪರಿವೀಕ್ಷಕಿ ವೀಣಾ ಕುಮಾರಿ ಸ್ವಾಗತಿಸಿ, ಹರೀಶ್ ಬಂಗೇರ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here