ವೇಣೂರು ಐಟಿಐ: ಬಹುರಾಷ್ಟ್ರೀಯ ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ

0
9

ವೇಣೂರು ಐಟಿಐ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ 2025ರ ಸಾಲಿನಲ್ಲಿ ತರಬೇತಿ ಪಡೆದು ತೇರ್ಗಡೆಯಾಗುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳಿಂದ ಆಯ್ಕೆ ಸಂದರ್ಶನಗಳನ್ನು ನಡೆಸಲಾಯಿತು.


ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ ಟೊಯೋಟೊ ಕಿರ್ಲೋಸ್ಕರ್ ಮೋಟರ್ಸ್, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್, ಎಲ್ ಅಂಡ್ ಟಿ, ಇಶಾರ್ ಮೋಟಾರ್ಸ್, ಕಿರ್ಲೋಸ್ಕರ್ ಟೋಯೋಡಾ ಟೆಕ್ಸ್ಟೈಲ್ಸ್ ಮೆಷಿನರಿಸ್, ಬಾಷ್, ಸಸ್ಮೋಸ್, ಅದ್ವೆತ್ ಹುಂಡೈ, ಟ್ರೆöಡೆಂಟ್ ಗ್ರೂಫ್ಸ್, ಟಾಟಾ ಅರವಿಂದ್ ಮೋಟಾರ್ಸ್, ಭಾರತ್ ಅಟೋ ಕಾರ್ಸ್, ಭವಾನಿ ಇಂಡಸ್ಟ್ರಿಸ್‌ ಮುಂತಾದ ಖ್ಯಾತನಾಮ ಕೈಗಾರಿಕಾ ಸಂಸ್ಥೆಗಳಿಂದ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಆಸುಪಾಸಿನ ಹಲವಾರು ಐಟಿಐ ಸಂಸ್ಥೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಈ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಂಡಿದ್ದು ಐಟಿಐ ತರಬೇತಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೇಮಕಾತಿಯ ಅವಕಾಶವನ್ನು ಪಡೆದಿದ್ದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲದಂತಾಗಿದ್ದು ಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶ ಪ್ರಾಪ್ತಿಯಾಗಿದೆ. ವೇಣೂರು ಐಟಿಐಯ ಎಲ್ಲಾ ತರಬೇತಿದಾರರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಐಟಿಐಗಳ 600ಕ್ಕೂ ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಇದರ ಪ್ರಯೋಜನ ಪಡೆಯುವಂತಾಗಿದೆ ಎಂದು ವೇಣೂರು ಐಟಿಐನ ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here