ಸಂತೆಕಟ್ಟೆಯ ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ತುಳುನಾಡ ರಕ್ಷಣಾ ವೇದಿಕೆಗೆ ಸಂದ ಜಯ!

0
17

ಉಡುಪಿ : ಸಂತೆಕಟ್ಟೆಯಲ್ಲಿ ಸರ್ವೀಸ್ ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಎರಡು ದಿನಗಳ ಹಿಂದೆ ತುಳುನಾಡ ರಕ್ಷಣಾ ವೇದಿಕೆ ಧ್ವನಿ ಎತ್ತಿತ್ತು. ಇದೀಗ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆಯಲ್ಲಿ ಬೆಳೆದಿದ್ದ ಹುಲ್ಲುಗಳನ್ನು ಕಟಾವು ಮಾಡಿದೆ.

ಎರಡು ದಿನಗಳ ಹಿಂದೆ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು, ಸಂತೆಕಟ್ಟೆಯ ನಗರಸಭೆ ಕಟ್ಟಡದಿಂದ, ದಾರಿ ದೀಪ ಹಾಗೂ ಬರೋಡ ಬ್ಯಾಂಕಿನಿಂದ ರೋಬೋ ಸಾಫ್ಟ್ ತನಕ ಬೆಳೆದಿದ್ದ ಬೃಹದಾಕಾರದ ಹುಲ್ಲುಗಳನ್ನು ಕಟಾವು ಮಾಡುವಂತೆ ಆಗ್ರಹಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಸ್ಪಂದಿಸಿದ ಹೆದ್ದಾರಿ ಇಲಾಖೆ ಇದೀಗ ಸರ್ವೀಸ್ ರಸ್ತೆಯಲ್ಲಿ ಬೆಳೆದಿದ್ದ ಹುಲ್ಲುಗಳನ್ನು ಕಟಾವು ಮಾಡುವ ಕಾರ್ಯ ಆರಂಭಿಸಿದೆ.

ಇನ್ನೂ ಬಾಕಿ ಇದೆ ಹೋರಾಟ!

ಸಂತೆಕಟ್ಟೆಯ ಅಂಡರ್ ಪಾಸ್ ಕಾಮಗಾರಿ ಕಳೆದ 7 ವರ್ಷಗಳಿಂದ ನಡೆಯುತ್ತಿದ್ದು, ಇನ್ನೂ ಅಪೂರ್ಣವಾಗಿದೆ.

ಸರ್ವೀಸ್ ರಸ್ತೆಯ ಅವ್ಯವಸ್ಥೆ ಮುಂದುವರೆದಿದ್ದು ಪಾದಾಚಾರಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ.

ಈ ಭಾಗದಲ್ಲಿ ದಾರಿ ದೀಪದ ವ್ಯವಸ್ಥೆ ಇಲ್ಲ.

ಆದ್ದರಿಂದ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕೆಂದು ಸಂಬಂಧಪಟ್ಟ ಇಲಾಖೆಗೆ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು ಆಗ್ರಹಿಸಿದ್ದಾರೆ.