ವಿದ್ಯಾಪೋಷಕ್ ಶೈಕ್ಷಣಿಕ ಸಮಾವೇಶ

0
3

ವಿವಿಧ ತರಗತಿಗಳಲ್ಲಿ ಇಂಜಿನೀಯರಿಂಗ್ ವ್ಯಾಸಾಂಗ ಮಾಡುತ್ತಿರುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳ ಒಂದು ದಿನದ ಶೈಕ್ಷಣಿಕ ಮಾರ್ಗದರ್ಶಿ ಶಿಬಿರ ಇಂದು (02.08.2026) ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರುಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಯು. ಸಿ. ನಿರಂಜನ್ ನೇತೃತ್ವದಲ್ಲಿ ಡಾ. ಪ್ರಶಾಂತ ಹೆಬ್ಬಾರ್, ಶ್ರೀಪಾದ ಹೆಬ್ಬಾರ್, ಕಿರಣ್ ನಾಯ್ಕ್, ಡಾ. ಮಂಜುಳ ಸಿ. ಬೆಳವಾಗಿ, ದಿವ್ಯಶ್ರೀ ಬಿ. ತಂಡ ಹಾಗೂ ಯೋಗೀಶ್‍ಚಂದ್ರಾಧರ್, ಪ್ರತಿಮಾ ಪಾಂಗಣ್ಣಾಯ, ರಮ್ಯಾ ದೇಶಪಾಂಡೆ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಜೀವನ್ ಮೌಲ್ಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಯು. ಎಸ್. ರಾಜಗೋಪಾಲ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ಸಹಕರಿಸಿದರು. ಸಂಸ್ಥೆಯ ಸದಸ್ಯರಾದ ವಿಜಯಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯ, ಅಶೋಕ ಎಂ., ಎನ್. ರಾಮ ಭಟ್, ಪ್ರಭಾಕರ ಭಂಡಿ, ವಸಂತ ಆರ್. ಮಂಜುನಾಥ ಭಾಗವಹಿಸಿದ್ದರು. ವಿದ್ಯಾಪೋಷಕ್‍ನ 227 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ ನವೀಕರಣ ಅರ್ಜಿ ನಮೂನೆ ನೀಡಲಾಯಿತು.