ವಿಶ್ವ ಕೊಂಕಣಿ ಕೇಂದ್ರ : ಹತ್ತನೇ ತರಗತಿ ಕೊಂಕಣಿ ತೃತೀಯ ಭಾಷೆಗೆ 100 ಫ಼ಲಿತಾಂಶ

0
7

ಮಹಾನಗರ : ಕರ್ನಾಟಕದ ಹತ್ತನೇಯ ತರಗತಿಯ ಬೋರ್ಡ ಪ್ಪರೀಕ್ಷೆಗೆ ಕೊಂಕಣಿ ತೃತೀಯ ಭಾಷೆಗೆ ದಾಖಲಾದ ಎಲ್ಲ ೩೪ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ೧೦೦% ಫ಼ಲಿತಾಂಶವನ್ನು ದಾಖಲಿಸಿದ್ದಾರೆ.

ಇವರಲ್ಲಿ ಮಂಗಳೂರಿನ ನಲಂದಾ ಆಂಗ್ಲ ಮಾಧ್ಯಮ ಶಾಲೆಯ ಗಗನ್ ಭಟ್ಟ ಹಾಗೂ ಕರಣ್ ಸಿಂಘ ಮತ್ತು ಕಾರ್ಕಳದ ಎಸ್.ವಿ.ಟಿ ಶಾಲೆಯ ಸಂಧ್ಯಾ ಸಹಿತ ಮೂವರು ವಿದ್ಯಾರ್ಥಿಗಳು ೧೦೦ ಅಂಕಗಳನ್ನು ಪಡೆದಿದ್ದಾರೆಂದು ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ಥರಾದ ಡಾ.ಕಸ್ತೂರಿ ಮೋಹನ್ ಪೈಯವರು ತಿಳಿಸಿದ್ದಾರೆ.

ಕಳೆದ 17 ವರ್ಷಗಳಿಂದ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಮೂರು ಜಿಲ್ಲೆಗಳ ಹಲವಾರು ಶಾಲೆಗಳಿಗೆ ಕೊಂಕಣಿ ಶಿಕ್ಷಕರ ಮಾಸಿಕ ಗೌರವ ಧನ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ಲಿಖಿತ ಕೊಂಕಣಿಯಲ್ಲಿ ಪ್ರಶಿಕ್ಷಣ ನೀಡಿ ಇಂದಿನ ತನಕ ೪೦೦೦ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕೊಂಕಣಿ ಭಾಷೆಯಲ್ಲಿ ನಿಜಾರ್ಥದಲ್ಲಿ ಕೊಂಕಣಿಯಲ್ಲಿ ಅಕ್ಷರಸ್ಥರಾಗಿದೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷ ನಂದಗೋಪಾಲ್ ಶೆಣೈ, ಖಜಾಂಚಿ ಬಿ.ಆರ್.ಭಟ್ಟ ಹಾಗೂ ಉಪಾಧ್ಯಕ್ಷರಾದ ವಿಲಿಯಮ್ ಡಿಸೋಜ, ಕಿರಣ್ ಬುಡಕುಳೆ ಹಾಗೂ ರಮೆಶ ನಾಯಕ್ ಮೈರಾ ಇವರು ಎಲ್ಲರನ್ನೂ ಅಭಿನಂದಿಸಿದ್ದಾರೆ. 

LEAVE A REPLY

Please enter your comment!
Please enter your name here