ನಗರದಲ್ಲಿ ಸಿ.ಎ. ಪರೀಕ್ಷಾಪೂರ್ವ ತರಬೇತಿಗಳು ಲಭ್ಯವಿದ್ದರೂ, ಸಾಮಾನ್ಯ ಸಾಮರ್ಥ್ಯದ ಯುವಕರಲ್ಲಿ ಆತ್ಮವಿಶ್ವಾಸ ಬೆಳೆಸುವ, ಹಾಗೂ ಎಲ್ಲಾ ಆಸಕ್ತರಿಗೆ ಮುಕ್ತವಾಗಿರುವ, ವಿಶಿಷ್ಟ ರೀತಿಯ ತರಬೇತಿಯೆಂದರೆ ವಿಶ್ವ ಕೊಂಕಣಿ ಕೇಂದ್ರದ ‘ಸಿ.ಎ. ಪವರ್ 25’ ತರಬೇತಿ.
ಈ ಬಾರಿ ಇಂತಹ ಆರನೆಯ ” ಸಿ.ಎ. ಪವರ್ 25- ಸಿ.ಎ ಇಂಟರ್ ಸೀಸನ್ –6 ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಿ.02-04-2025 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು “ವಿದ್ಯಾರ್ಥಿಗಳು ತಮ್ಮ ನಿರಂತರವಾದ ಛಲ ಸಾಧನೆ, ಧೃಢ ನಿರ್ಧಾರ, ಆತ್ಮವಿಶ್ವಾಸ ದಿಂದ ಮಾತ್ರ ತಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಜೀವನದಲ್ಲಿ ನಡೆದ ಘಟನೆಗಳ ಉದಾಹರಣೆಗಳೊಂದಿಗೆ ಶಿಬಿರಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ತಮ್ಮ ಮನೋಸಾಮರ್ಥ್ಯ ಉಪಯೋಗಿಸಿಕೊಂಡು ಜಯಶೀಲರಾಗಿ ಗುರಿಯನ್ನು ಮುಟ್ಟುವ, ಆತ್ಮವಿಶ್ವಾಶ ಬೆಳೆಸಲು ಅನುಕೂಲತೆಯನ್ನು ತಿಳಿಸಿದರು. ಸಿಎಒ ಡಾ ಬಿ ದೇವದಾಸ ಪೈ, ಮಂಗಳೂರು ಇನ್ಸ್ಟಿಟ್ಯೂಟ ಆಫ್ ಚಾರ್ಟಡ್ ಅಕೌಂಟೆಂಟ್ ಸಂಸ್ಥೆಯ ಕೋಶಾಧಿಕಾರಿ ಸಿಎ ಬಾಲಸುಬ್ರಹ್ಮಣ್ಯ ಹಾಗೂ ತರಬೇತಿಯ ಉಪನ್ಯಾಸಕರಾದ ಮುಂಬಯಿಯ ತೇಜಸ್ ದಿಲೀಪ್ ಶಾ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು, ಜ್ನಾನವನ್ನು ಹಂಚಿಕೊಂಡರು. ವಿದ್ಯಾರ್ಥಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.
ಇಪ್ಪತ್ತು ದಿವಸಗಳ ಅವಧಿಯ ಈ ಉಚಿತ ಸನಿವಾಸೀ ತರಬೇತಿಯಲ್ಲಿ ಪರೀಕ್ಷಾರ್ಥಿಗಳಿಗೆ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ನೀಡಿ ಅಂತಿಮ ಮಟ್ಟಕ್ಕೆ ಸಿದ್ಧಗೊಳಿಸುವ ಉದ್ದೇಶವಾಗಿದೆ.
ವಿಶ್ವ ಕೊಂಕಣಿ ಕೇಂದ್ರ ದೊಂದಿಗೆ ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ಸಿ.ಎ. ಪವರ್ 25ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.
Thank You