ರಾಷ್ಟ್ರೀಯತೆಯ ನಿರ್ಮಾಣ ಹಾಗೂ ಮಾನವೀಯತೆಯ ಅನಾವರಣದೊಂದಿಗೆ ಸಹೋದರತೆಯ ಸಂದೇಶ ನೀಡುವ ಸಹೃದಯ ಸಹಕಾರಗಳ ಸಂಕೇತವಾದ ರಕ್ಷಾ ಬಂಧನವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ “ವಿವೇಕ ಚಂದನ ರಕ್ಷಾ ಬಂಧನ” ಎಂಬ ಶೀರ್ಷಿಕೆಯೊಂದಿಗೆ ವಿನೂತನ ರೀತಿಯಲ್ಲಿ ಆಚರಿಸಲಾಯಿತು.
ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ಆರಕ್ಷಕ ಠಾಣೆ,ಪತ್ರಿಕಾ ಕಛೇರೆ, ಆಸ್ಪತ್ರೆ ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ರಕ್ಷೆಯನ್ನು ಕಟ್ಟಿ, ರಕ್ಷಾ ಬಂಧನ ಸಂದೇಶ ನೀಡಿ, ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು.

