ಪಶ್ಚಿಮ ಘಟ್ಟ, ನೇತ್ರಾವತಿ ಸಂರಕ್ಷಣೆ ಮತ್ತು ಸಂಶೋಧನಾ ವೇದಿಕೆ

0
3

ನೇತ್ರಾವತಿ ನದಿ ಮತ್ತು ಪಶ್ಚಿಮ ಘಟ್ಟಗಳ ಜಲಾನಯನ ಪ್ರದೇಶಗಳನ್ನು ಸಂರಕ್ಷಿಸಿ, ಸ್ಥಳೀಯ ಸಮುದಾಯವನ್ನು ಸಬಲೀಕರಿಸಿ, ಪರಿಸರ ನ್ಯಾಯಕ್ಕಾಗಿ ಹೋರಾಡಿ ವಿನಾಶವನ್ನು ತಡೆಗಟ್ಟುವ ಉದ್ದೇಶದ ವೇದಿಕೆ ಮೂಲಕ ಒಗ್ಗೂಡುವಿಕೆ ನಡೆಯುತ್ತಿದೆ. ಜನರ ಹಕ್ಕು, ಬದುಕಿನ ಅವಶ್ಯಕತೆ, ಅರಿವಿನ ಕೊರತೆ, ಜೀವನೋಪಾಯದ ಅಗತ್ಯತೆಗಳ ತಿಳಿ ಹೆಚ್ಚಿ ನೇತ್ರಾವತಿ ನದಿ ತಿರುಗು ಯೋಜನೆ, ಹೆಸರಿನಲ್ಲಿ ನಡೆಯುತ್ತಿರುವ ದುರುಪಯೋಗವನ್ನು ಹೋಗಲಾಡಿಸಲು ವೇದಿಕೆ ಪ್ರಯತ್ನಿಸುತ್ತದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಹಾನಿ ಉಂಟು ಮಾಡಿದೆ.

2026 ಆಗಸ್ಟ್ 15ರಿಂದ ಸಂಗ್ರಹಿಸಲಾದ ಬೃಹತ್ ಸಹಿ ಅಭಿಯಾನದ ಮೂಲಕ ಹೊಂದಿರುವ ಬಹಿರಂಗ ಪತ್ರವನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಲಾಗುವುದು. ಪರಿಸರ ವಿನಾಶದ ವಿರುದ್ಧ ಜನರನ್ನು ಜಾಗೃತಗೊಳಿಸಿ, ಒಗ್ಗೂಡಿಸಿ ಹೋರಾಟಕ್ಕೆ ಆಂದೋಲನದ ರೂಪವನ್ನು ನೀಡಲಾಗುವುದು. ಆ ಮೂಲಕ ರಾಷ್ಟ್ರದ ಪರಿಸರ ಭದ್ರತೆಗೆ ಅಪಾಯವನ್ನು ತಪ್ಪಿಸಲು ಪ್ರಯತ್ನಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಆದಿತ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ಮುಜಮಿನ್, ಗೌತಮ್, ಪಾರೇನ್ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್

.