ನವದೆಹಲಿ : ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ಸಿಕ್ಕಿಬಿದ್ದ ಬಳಿಕ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಗಂಡನೊಬ್ಬ ತೆಗೆದುಕೊಂಡ ನಿರ್ಧಾರ ನೆಟ್ಟಿಗರ ಗಮನ ಸೆಳೆದಿದೆ.
ವರದಿಗಳ ಪ್ರಕಾರ, 36 ವರ್ಷದ ಮಹಿಳೆಯೊಬ್ಬರು 24 ವರ್ಷದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಗಂಡ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಆದರೆ ಒಂದು ದಿನ ಪತಿ ಅನಿರೀಕ್ಷಿತವಾಗಿ ಮನೆಗೆ ಮರಳಿದಾಗ ಇಬ್ಬರೂ ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಘಟನೆಯಿಂದ ಕೋಪಗೊಂಡ ಪತಿ ಸಾಮಾನ್ಯವಾಗಿ ನಡೆಯುವಂತೆ ಜಗಳ ಅಥವಾ ಪೊಲೀಸ್ ಠಾಣೆಯ ಮೆಟ್ಟಿಲೇರುವ ಬದಲು ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ತನ್ನೊಂದಿಗೆ ಬದುಕಲು ಇಷ್ಟವಿಲ್ಲದಿದ್ದರೆ ಪ್ರೇಮಿಯೊಂದಿಗೇ ಜೀವನ ಸಾಗಿಸು ಎಂದು ಹೇಳಿ, ಅವರಿಬ್ಬರಿಗೂ ಸ್ಥಳದಲ್ಲೇ ಹಾರ ಬದಲಾಯಿಸಿ ಮದುವೆ ಮಾಡಿಸಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದೆ.

