ಸಂಸ್ಕಾರ ನೋಟ್ ಪುಸ್ತಕಗಳ ಉಚಿತ ವಿತರಣೆ

0
9

ಉಡುಪಿ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಟಿ. ಎ. ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ 74 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

‘ಸಂಸ್ಕಾರ ವಹಿ’ಯ ಮುಖಪುಟ ಹಾಗೂ ಹಿಂಬದಿಯ ಪುಟಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರಪುರುಷರ ಹಾಗೂ ಉತ್ತಮ ರಾಜ್ಯಾಡಳಿತ ನಡೆಸಿ ಪ್ರಜೆಗಳ ಹಿತಕ್ಕಾಗಿ ಹೋರಾಡಿದ ರಾಜ–ಮಹಾರಾಜರ ಆದರ್ಶಗಳು ನೀಡಲಾಗಿದೆ. ಒಳಗಿನ ಪುಟಗಳಲ್ಲಿ ಸುಸಂಸ್ಕಾರ ಮತ್ತು ನೈತಿಕತೆ ಕುರಿತು ವಿಷಯಗಳು ಒಳಗೊಂಡಿವೆ. ಅದನ್ನು ಓದಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಕ್ಕಳು ‘ಆದರ್ಶ ವಿದ್ಯಾರ್ಥಿ’ಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ. ಇದರಿಂದ ಅವರು ಮುಂದೆ ‘ಆದರ್ಶ ರಾಷ್ಟ್ರ’ವನ್ನು ಕಟ್ಟಲು ಸಾಧ್ಯವಾಗುತ್ತದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರಾದ ಸೌ. ಪ್ರತಿಮಾ, ಸೌ. ವನಮಾಲಾ, ಗೀತಾ ಆಚಾರ್ಯ, ದಿನೇಶ್ ಮತ್ತು ಧರ್ಮಪ್ರೇಮಿ ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here