Tuesday, April 22, 2025
HomeUncategorizedರೇಡಿಯೊ ಮಣಿಪಾಲದಲ್ಲಿ ವಿಶ್ವ ಆರೋಗ್ಯದಿನದ ವಿಶೇಷ

ರೇಡಿಯೊ ಮಣಿಪಾಲದಲ್ಲಿ ವಿಶ್ವ ಆರೋಗ್ಯದಿನದ ವಿಶೇಷ

ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಕೇಂದ್ರದಲ್ಲಿ ವಿಶ್ವ ಆರೋಗ್ಯದಿನದ ಕುರಿತಾಗಿ ಮಾಹೆಯ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ವಿಭಾಗದವರಿಂದ ವಿಶೇಷ ಕಾರ್ಯಕ್ರಮ ಮೂಡಿಬರಲಿದೆ ಈ ಕಾರ್ಯಕ್ರಮದಲ್ಲಿ ಕ್ಲಾರಾ, ಸುರೇಖಾ, ಅನನ್ಯ,ಅನ್ವಿಕ ಹಾಗೂ ಡಾ.ಮಾಲತಿ ಜಿ.ನಾಯಕ್ ಭಾಗವಹಿಸಲಿದ್ದಾರೆ.
ಇದು ಎಪ್ರಿಲ್ 7ರಂದು ಸೋಮವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ ಹಾಗೂ ಎಪ್ರಿಲ್ 8 ರಂದು ಮಧ್ಯಾಹ್ನ 1ಗಂಟೆಗೆ ಮರುಪ್ರಸಾರಗೊಳ್ಳಲಿದೆ.
ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕವೂ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular