
ಪೀಪಲ್ಸ್ ಎಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ ಮೆಂಟ್ ಹೆಸರಿನಲ್ಲಿ ವಿಶ್ವ ಮರೆಗುಳಿ ಮಾಸಾಚರಣೆಯನ್ನು ಮಂಗಳೂರಿನ ಕದ್ರಿಪಾರ್ಕನಲ್ಲಿ ಸೆಪ್ಟೆಂಬರ್ ಒಂದರಂದು ಉದ್ಘಾಟಿಸಲಾಗುವುದು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾಕ್ಟರ್ ಸಿವಿ ರಘುವೀರ್, ಡಾಕ್ಟರ್ ಪ್ರಭಾ ಅಧಿಕಾರಿ ಎಂ ಆರ್, ಅವರುಗಳು ಎಲ್ಲವನ್ನು ಮರೆತು ಬಿಡುವ ವ್ಯಕ್ತಿಗಳನ್ನು ಬಹಳ ಜತನದಿಂದ ನೋಡಿಕೊಳ್ಳಬೇಕಾಗುತ್ತದೆ.
ಆದುದರಿಂದ ವಯೋಸಹಜ ಕಾಯಿಲೆ ಖಂಡಿತಕ್ಕೂ ವಾಸಿಯಾಗುತ್ತದೆ. ಆದರೆ ಯುವಕರು ಮಕ್ಕಳು ಆ ಬಗ್ಗೆ ಆಸಕ್ತಿ ವಹಿಸಿದಲ್ಲಿ ಬಹಳ ಉತ್ತಮ ರೀತಿಯಲ್ಲಿ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು. ಸಪ್ಟೆಂಬರ್ 1ನೇ ತಾರೀಖಿನಂದು ಬೆಳಗ್ಗೆ 7:00 ಯಿಂದ 10:30ರ ತನಕ ಮಂಗಳೂರಿನ ಕದ್ರಿಪಾರ್ಕ್ ನಲ್ಲಿ ಯಾವುದೇ ವಯಸ್ಸಿನ ಇತಿಮಿತಿ ಇಲ್ಲದೆ ಎಲ್ಲರೂ ಭಾಗವಹಿಸಿ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ, ಜರಾರ್ಡಿನ್ ಡಿಸೋಜ, ಖಜಾಂಚಿ ಮೋಹನ್ ರಾಜ್ ಹಾಜರಿದ್ದರು.
.
ವರದಿ ರಾಯಿ ರಾಜ ಕುಮಾರ್
