ಸೆ.06ರಂದು ತುಳುತಿಟ್ಟಿನ ಪೂರ್ವರಂಗ ಸಹಿತ ಯಕ್ಷಗಾನ ಪ್ರದರ್ಶನ ಹಾಗೂ ಸಂಸ್ಮರಣಾ ಗೋಷ್ಠಿ

0
5

ಮಂಗಳೂರು : ಯಕ್ಷಗಾನಾಚರ್ಯ ತೋನ್ಸೆ ಕಾಂತಪ್ಪ ಮಾಸ್ಟರ್ ಮತ್ತು ಕವಿವರ ಮಧು ಕುಮಾರ್ ನಿಸರ‍್ಗ ಅವರ ಸಂಸ್ಮರಣಾ ಗೋಷ್ಠಿ ಹಾಗೂ ‘ಕೋಟಿ ಚೆನ್ನಯ’ ತುಳು ಯಕ್ಷಗಾನ ಪ್ರರ‍್ಶನ ಸೆ.06 ರಂದು ಬೆಳಿಗ್ಗೆ 10.00 ಕ್ಕೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಥೀಯೇಟರ್ ಯಕ್ಷ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಕಾರ‍್ಯಕ್ರಮ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು.

ಪಾಡ್ದನ ಪರಿಣಿತರಾದ ರುಕ್ಕು ಕರಿಯಂಗಳ ಕೋಟಿ ಚೆನ್ನಯ ಪಾಡ್ದನದ ಬರ‍್ಮೆರೆ ಸಂಧಿಯನ್ನು ಪ್ರಸ್ತುತಿ ಪಡಿಸುವರು. ಯಕ್ಷಗಾನ ವಿದ್ವಾಂಸ , ಅರ್ಥದಾರಿ ಡಾ.ಪ್ರಭಾಕರ ಜೋಶಿ ಅವರು ಸಂಸ್ಮರಣಾ ಉಪನ್ಯಾಸ ಮಾಡುವರು. ಸಂಯುಕ್ತ ವಿಷಯಕ ಸಂಶೋಧಕ ತತ್ತ್ವ ಶಾಸ್ತ್ರೀಯ ಚಿಂತಕ ಪ್ರೊ. .ಕೆ.ಪಿ.ರಾವ್ ಅವರು ಪಂಜೆ ಮಂಗೇಶರಾಯರು ಬರೆದ ಸಣ್ಣಕತೆ ‘ಕೋಟಿ ಚೆನ್ನಯ’ದ ಬಗ್ಗೆ ಮಾತನಾಡುವರು.

ಸುನಿಲ್ ಪಲ್ಲಮಜಲು ಮತ್ತು ಸ್ಕಂದ ಕೊನ್ನಾರ್ ಸಂಯೋಜನೆಯ ಈ ಕಾರ‍್ಯಕ್ರಮದಲ್ಲಿ ಪೃಥ್ವಿರಾಜ ಕವತ್ತಾರು

ನಿರ‍್ದೇಶನದೊಂದಿಗೆ ಪ್ರಸಿದ್ಧ ಕಲಾವಿದರಿಂದ ತುಳುತಿಟ್ಟಿನ ಪರ‍್ವ ರಂಗ ಸಹಿತ ತುಳು ಯಕ್ಷಗಾನ ಪ್ರದರ‍್ಶನ ನಡೆಯಲಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.