ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಜ. 30 ರಿಂದ ಫೆ. 4 ರವರೆಗೆ ಹಾಗೂ ಶ್ರೀ ಈಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಫೆ. 15 ರಿಂದ 17ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು .
ಕ್ಷೇತ್ರದ ಅರ್ಚಕರಾದ ಹಯಗ್ರೀವ ಪಡ್ಡಿಲ್ಲಾಯ, ನರಸಿಂಹ ಭಟ್, ರಾಜಾರಾಮ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು .
ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಎಮ್ ಎಚ್ ಅರವಿಂದ ಪೂಂಜ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವಿಕುಮಾರ್, ರಾಘವೇಂದ್ರ ಟಿ,ಶಶೀoದ್ರ ಸಾಲ್ಯಾನ್,ನೂತನ್ ಶೆಟ್ಟಿ,
ಜೀರ್ಣೋದ್ಧಾರ ಸಮಿತಿಯ ವೈ ಎನ್ ಸಾಲ್ಯಾನ್, ಹರ್ಷರಾಜ್ ಶೆಟ್ಟಿ , ಲಕ್ಷ್ಮಣ ಸುವರ್ಣ, ಸುರೇಶ್ ರಾವ್, ಗೋಪಿನಾಥ, ಕೃಷ್ಣದೇವಾಡಿಗ,ವಿಷ್ಣುಮೂರ್ತಿ ಯುವಕ ವೃಂದದ ಅಧ್ಯಕ್ಷ ಶೈಲೇಶ್ ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷೆ ಕಸ್ತೂರಿ ದೇವಾಡಿಗ, ಶೋಭಾ ಸುರೇಶ್, ನೇತ್ರ ಧನಂಜಯ ಸನಿಲ್, ಪ್ರವೀಣ್ ಕೋಟ್ಯಾನ್, ದಾಮೋದರ ಶೇಖರ್ ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.


