ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಇದೇ ಜುಲೈ 7ನೇ ತಾರೀಕಿನಿಂದ ಸಂಜೆ 5.00 ರಿಂದ 6.30 ರ ವರೆಗೆ ಯೋಗಾಸನ ಶಿಬಿರ ನಡೆಯಲಿದೆ. ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗಾಸನ, ಮುದ್ರೆಗಳು, ಕ್ರಿಯೆಗಳು, ಪ್ರಾಣಾಯಾಮ, ಸೂರ್ಯನಮಸ್ಕಾರ, ಧ್ಯಾನ ಮಾಡುವ ವಿಧಾನ ತಿಳಿಸಿಕೊಡುವರು. ಅಂತರಾಷ್ಟ್ರಿಯ ಯೋಗದಿನಾಚರಣೆಯ ಪೂರ್ವಭಾವಿ ತಯಾರಿಯ ಯೋಗಾಭ್ಯಾಸ. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗಾಗಿ 2414412 ಸಂಪರ್ಕಿಸಿ.