ದಾವಣಗೆರೆ:ಭಾರತೀಯ ಸನಾತನ ಪರಂಪರೆಯಲ್ಲಿ ಒಂದಾದ ಯೋಗ ಶಾಸ್ತç ಕೇವಲ ಪ್ರದರ್ಶನಕ್ಕೆ ಸೀಮಿತವಾಗದೇ ನಿತ್ಯಾನುಷ್ಠಾನದ ಕಲೆಯಾಗಬೇಕು. ಆಗ ಮಾತ್ರ ನಾವು ನೀವೆಲ್ಲಾ ಯೋಗದ ಪರಿಪೂರ್ಣತೆಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಯೋಗ ಪಿತಮಹಾ ಪತಂಜಲಿ ಮಹರ್ಷಿಯವರು ಮಾನವನ ಜೀವನಕ್ಕೆ ಯೋಗಸಾಧನೆಯ ತುತ್ತತುದಿಯಲ್ಲಿ ತಲುಪಲು ಮೋಕ್ಷ ಸಾಧನೆಗಾಗಿ ಅಷ್ಟಾಂಗಯೋಗವನ್ನು ಕಲಿಯುವ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು ಅಂತರಾಷ್ಟೀಯ ಯೋಗ ಪ್ರಶಸ್ತಿ ಪುರಸ್ಕೃತರಾದ ಯೋಗ ತಜ್ಞರಾದ ಡಾ. ರಾಘವೇಂದ್ರ ಗುರೂಜಿಯವರ ತಮ್ಮ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಆಶ್ರಯದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಉಚಿತ ಯೋಗ ಶಿಬಿರವನ್ನು ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈಯವರು ಮಾತನಾಡಿ, ಯೋಗ, ಧ್ಯಾನ, ಸಾಮಾಜಿಕ ಕಾಳಜಿಯ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳು ಮಾನವನ ಜೀವನದ ಸದ್ಭಳಕೆ ಕೇವಲ ಹೊಟ್ಟೆ ಪಾಡಿಗೆ ಸೀಮಿತವಾಗದೇ ಈ ಚಟುವಟಿಕೆಗಳಿಂದ ನಮ್ಮ ನಿಮ್ಮೆಲ್ಲರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ|| ಮಂಗಳಾ ಶೇಖರ್ ಮಾತನಾಡಿ, ನಾಟ್ಯ, ಯೋಗ ಒಂದು ನಾಣ್ಯದ ಎರಡು ಮುಖಗಳು ನಾಟ್ಯ ಪರಂಪರೆಯೂ ಯೋಗ ಧ್ಯಾನಕ್ಕೆ ಪೂರಕ ಎಂದರು.
ಯೋಗ ಶಿಕ್ಷಕಿ ಶ್ರೀಮತಿ ಸಂಧ್ಯಾ ಶ್ರೀನಿವಾಸ್, ವಿದ್ಯಾನಗರ ಶಾಖೆಯ ಅಧ್ಯಕ್ಷರಾದ ರಾಜಶೇಖರ ಬೆನ್ನೂರು, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ಮುಂತಾದವರು ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ಯೋಗ ಸಾಧನೆಯ ಡಾ. ರಾಘವೇಂದ್ರ ಗುರೂಜಿ, ಆಯುರ್ವೇದ ವೈದ್ಯರಾದ ಡಾ|| ಮಂಗಳಾ ಶೇಖರ್ ರವರಿಗೆ ಇತ್ತೀಚಿಗೆ ಪಿ.ಹೆಚ್.ಡಿ. ಡಾಕ್ಟರೇಟ್ ಪದವಿ ಬಂದಿದ್ದಕ್ಕೆ ಕಲಾಕುಂಚದಿAದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮತಿ ಸುಚಿತ್ರಾ ಗಣೇಶ್‌ರಾವ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಮಾ ಏಕಾಂತಪ್ಪ ಸ್ವಾಗತಿಸಿದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಯಕ್ಷಗಾನ ಕಲಾವಿದೆ ಶ್ರೀಮತಿ ಸುಧಾ ಸಂತೋಷ್ ವಂದಿಸಿದರು.
Home Uncategorized ಯೋಗ ಕೇವಲ ಪ್ರದರ್ಶನದ ಕಲೆಯಲ್ಲ ಇದೊಂದು ನಿತ್ಯಾನುಷ್ಠಾನದ ಪರಂಪರೆ-ಯೋಗ ತಜ್ಞರಾದ ಡಾ. ರಾಘವೇಂದ್ರ ಗುರೂಜಿ