ಸಹಜಸ್ಥಿತಿಯಾದ ಆನಂದ ಸ್ವರೂಪವನ್ನು ಪಡೆಯುವ ಸಾಧನವೆ ಯೋಗ

0
98


ಮಂಗಳೂರು: ಮಂಗಳಾದೇವಿ ಸಮೀಪದ ಶ್ರೀ ರಾಮಕೃಷ್ಣ ಮಠದಲ್ಲಿ ಮೇ ತಿಂಗಳ (2025) ಎರಡು ವಾರಗಳಲ್ಲಿ ನಡೆಯುವ ಯೋಗ ಶಿಬಿರವನ್ನು ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ ನಿಯಮಿತವಾದ ಯೋಗದ ಅಭ್ಯಾಸವು ಉತ್ತಮ ಮಾನಸಿಕ, ದೈಹಿಕ, ಮತ್ತು ಬೌದ್ಧಿಕ ಆರೋಗ್ಯಕ್ಕೆ ಸಹಕಾರಿ, ಇದರಿಂದ ಜೀವನಶೈಲಿ ಧನಾತ್ಮಕವಾಗಿ ಬದಲಾಯಿಸುತ್ತದೆ. ಯೋಗದ ಧ್ಯಾನದಿಂದ ಮನಸ್ಸಿಗೆ ಆಳವಿಶ್ರಾಂತಿ ನೆಮ್ಮದಿ ಒದಗಿಬರುತ್ತದೆ. ಸಹಜ ಸ್ಥಿತಿಯಾದ ಆನಂದ ಸ್ವರೂಪ ಪಡೆಯುವ ಸಾಧನೆಯೇ ಯೋಗ ಎಂದು ತಿಳಿಸಿದರು. ಯೋಗದ ಮಹತ್ವ, ಮಾಹಿತಿ, ನಿಯಮ ಹಾಗೂ ಸೂಚನೆಗಳನ್ನು ತಿಳಿಸಿದರು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಶಿಷ್ಯರಾದ ಸುಮಾ, ಕಾರ್ತಿಕ ಶೆಟ್ಟಿ, ಚಂದ್ರಹಾಸ ಮತ್ತು ಹರಿಣಿ ಸಹಕರಿಸಿದರು. ಈ ಶಿಬಿರದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಪೂರ್ವಬಾವಿ ತಯಾರಿ ಸಿದ್ಧತೆಯನ್ನು ಮಾಡಲಾಗುತ್ತದೆ. ಈ ಯೋಗ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಮಠವನ್ನು ಸಂಪರ್ಕಿಸುವAತೆ ತಿಳಿಸಲಾಯಿತು.

LEAVE A REPLY

Please enter your comment!
Please enter your name here