Saturday, June 14, 2025
HomeUncategorizedಭಕ್ತಿಯ ಭಾವದಿಂದ ಭಗವಂತನಿಗೆ ಅರ್ಪಿಸುವುದೇ ಶ್ರೇಷ್ಠ ಸೇವೆ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಮೂಡುವೇಣುಪುರಕ್ಕೆ ಗೋಕರ್ಣ ಮಠಾಧೀಶರ...

ಭಕ್ತಿಯ ಭಾವದಿಂದ ಭಗವಂತನಿಗೆ ಅರ್ಪಿಸುವುದೇ ಶ್ರೇಷ್ಠ ಸೇವೆ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಮೂಡುವೇಣುಪುರಕ್ಕೆ ಗೋಕರ್ಣ ಮಠಾಧೀಶರ ಪ್ರಥಮ ಭೇಟಿ

ಭಕ್ತಿಯ ಭಾವದಿಂದ ಭಗವಂತನಿಗೆ ಅರ್ಪಿಸುವುದೇ ಶ್ರೇಷ್ಠ ಸೇವೆ: ವಿದ್ಯಾಧೀಶ ತೀರ್ಥ ಸ್ವಾಮೀಜಿಮೂಡುವೇಣುಪುರಕ್ಕೆ ಗೋಕರ್ಣ ಮಠಾಧೀಶರ ಪ್ರಥಮ ಭೇಟಿಮೂಡುಬಿದಿರೆ: ಎಲ್ಲವೂ ದೇವರ ಸೃಷ್ಟಿಯೇ ಆಗಿರುವಾಗ ದೇವರಿಗೆ ನಾವು ನೀಡಿದ್ದೇವೆ ಎನ್ನುವ ಅಹಂಭಾವಕ್ಕೆ ಅರ್ಥವಿಲ್ಲ. ಭಾವ ಗ್ರಾಹಿಯಾಗಿರುವ ಭಗವಂತನಿಗೆ ನಮ್ಮದೇ ಎನ್ನುವಂತೆ ದೇವರಿಗೆ ನಾವು ನೀಡ ಬಹುದಾಗಿರುವುದು ಭಕ್ತಿ ಮಾತ್ರ ಎಂದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ನುಡಿದರು. ಅವರು ಶುಕ್ರವಾರ ಸಂಜೆ ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಕ್ಕೆ ತಮ್ಮ ಪ್ರಥಮ ಅನುಗ್ರಹ ಭೇಟಿ ನೀಡಿದ ಬಳಿಕ ಆಶೀರ್ವಚನ ನೀಡಿದರು.

ಶ್ರೀ ಸಂಸ್ಥಾನದ 550ನೇ ವರ್ಷಾಚರಣೆಯ ಅಂಗವಾಗಿ ನಡೆದಿರುವ 550 ದಿನಗಳ 550 ಕೋಟಿ ಶ್ರೀ ರಾಮನಾಮ ಜಪ ಅಭಿಯಾನದಲ್ಲಿ 120 ಜಪ ಕೇಂದ್ರಗಳು 85 ಉಪ ಕೇಂದ್ರಗಳಲ್ಲಿ ಈಗಾಗಲೇ ಒಟ್ಟು 415 ಕೋಟಿ ಜಪ ಪೂರ್ಣಗೊಂಡು ಸಂಕಲ್ಪಯಶಸ್ಸಿನ ಹಾದಿಯಲ್ಲಿದೆ ಎಂದ ಶ್ರೀಗಳವರು ನಮ್ಮ ಭಕ್ತಿಯ ಶ್ರೀ ರಾಮ ನಾಮ ಜಪ ಪರಮಾತ್ಮನಿಗೆ ಅರ್ಪಿಸುವುದೇ ಶ್ರೇಷ್ಠ ಸೇವೆ ಎಂದರು. ಕಳೆದ 222 ವರ್ಷಗಳಲ್ಲಿ ಶ್ರೀ ದೇವಳ ಹಾಗೂ ಸಂಸ್ಥಾನದ ಯತಿ ಪರಂಪರೆಯ ಬಾಂಧವ್ಯವನ್ನು ಅವರು ವಿವರಿಸಿದರು.ಕಾಪು ಮೊಕ್ಕಾಂನಿಂದ ಮೂಡುಬಿದಿರೆಗೆ ಚಿತ್ತೈಸಿದ ಶ್ರೀಗಳವರನ್ನು ಪೂರ್ಣ ಕುಂಭ ಸಹಿತ ಮಂಗಲ ವಾದ್ಯ ಘೋಷಗಳೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳವರು ಶ್ರೀವೆಂಕಟರಮಣ ಮತ್ತು ಶ್ರೀ ಹನುಮಂತ ದೇವಳಕ್ಕೆ ತಮ್ಮಪ್ರಥಮ ಭೇಟಿ ನೀಡಿದರು. ಬಳಿಕ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳವರನ್ನು ಆಡಳಿತ ಮಂಡಳಿಯ ವತಿಯಿಂದ ಪಾದಪೂಜೆ ಸಹಿತ ಗೌರವಿಸಲಾಯಿತು. ದೇವಳಗಳ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ ಸ್ವಾಗತಿಸಿದರು. ಜಪ ಕೇಂದ್ರದ ಪ್ರತಿನಿಧಿ ಎಂ. ಗಣೇಶ್ ಕಾಮತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎಂ. ನಾಗೇಂದ್ರ ಭಟ್ ವಂದಿಸಿದರು.

ವೈದಿಕ ವೃಂದದ ಪ್ರಾರ್ಥನೆ, ಆಶೀರ್ವಚನದ ಬಳಿಕ ಶ್ರೀ ರಾಮನಾಮ ಜಪ ಅಭಿಯಾನದ ಅಂಗವಾಗಿ ಇಲ್ಲಿನ ವಿದ್ಯಾನಿಧಿಃ ಜಪ ಕೇಂದ್ರದ ವಿಶೇಷ ಜಪ ಅಭಿಯಾನದಲ್ಲಿ ವೈದಿಕ ಎಂ. ಸುಧೇಶ್ ಭಟ್ ವಿಶೇಷ ಜಪ ಅಭಿಯಾನವನ್ನು ಸಂಕಲ್ಪದೊಂದಿಗೆ ನೆರವೇರಿಸಿದರು. ಶ್ರೀಗಳವರು ಜಪ ಅಭಿಯಾನದಲ್ಲಿ ಪಾಲ್ಗೊಂಡು ಶ್ರೀರಾಮ ದೇವರಿಗೆ ಮಹಾಪೂಜೆ ಸಲ್ಲಿಸಿದರು.ದೇವಳಗಳ ಮೊಕ್ತೇಸರರು. ಪ್ರಧಾನ ಅರ್ಚಕ ವೇ. ಮೂ. ಎಂ. ಹರೀಶ್ ಭಟ್ ಸಹಿತ ವೈದಿಕ ವೃಂದ, ಹೋಬಳಿಯ ಊರ, ಪರಪೂರಿನ ದೇವಳಗಳ ಪ್ರಮುಖರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಬಳಿಕ ಶ್ರೀಗಳವರು ಸಮಾಜ ಬಾಂಧವರಿಗೆ ಫಲಮಂತ್ರಾಕ್ಷತೆ ವಿತರಿಸಿದರು.ವಿದ್ಯಾಕಲ್ಪತರು ಬಳಗದ ವಿದ್ಯಾರ್ಥಿಗಳು ಸ್ತೋತ್ರ ಪಠನ, ಸಂಕೀರ್ತನೆಯಲ್ಲಿ ಸಹಕರಿಸಿದರು.ಪೊನ್ನೆಚಾರಿ ದೇವಳ ಭೇಟಿ: ಬಳಿಕ ಶ್ರೀಗಳವರು ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ತಮ್ಮ ಮೊದಲ ಅನುಗ್ರಹ ಭೇಟಿ ನೀಡಿದರು. ಅನುವಂಶಿಕ ಮೊಕ್ತೇಸರ ಎಂ.ಪಿ. ಅಶೋಕ್ ಕಾಮತ್ ಕುಟುಂಬಸ್ಥರು ಶ್ರೀಗಳವರನ್ನು ಗೌರವಾದರಗಳೊಂದಿಗೆ ದೇವಳಕ್ಕೆ ಸ್ವಾಗತಿಸಿ ಪಾದಪೂಜೆ ಸಲ್ಲಿಸಿ ಫಲಮಂತ್ರಾಕ್ಷತೆ ಸ್ವೀಕರಿಸಿದರು. ಬಳಿಕ ಶ್ರೀಗಳವರನ್ನು ಕಾಪು ಮೊಕ್ಕಾಂಗೆ ಬೀಳ್ಕೊಡಲಾಯಿತು.

RELATED ARTICLES
- Advertisment -
Google search engine

Most Popular