ಮಂಗಳೂರು : ಆರೋಗ್ಯ ಭಾರತಿ, ಮಂಗಳೂರು ಜಿಲ್ಲೆ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ), ಮಂಗಳೂರು ಇದರ ಜಂಟಿ ಆಶ್ರಯದಲ್ಲಿ 2026 ಜೂನ್ 21 ಅಂತರರಾಷ್ಟ್ರ ಯೋಗ ದಿನದಂದು ಯೋಗ ಶಿಬಿರ ಕಾರ್ಯಕ್ರಮ ಡಾ. ಮುರಳೀ ಮೋಹನ ಚೂಂತಾರು ಇವರ ನಿವಾಸ “ಸರೋಜಿನಿ”, ಬಿಜೈ, ಮಂಗಳೂರು ಇಲ್ಲಿ ಬೆಳಿಗ್ಗೆ 7 ರಿಂದ 8 ರವರೆಗೆ ನಡೆಯಿತು.
ಯೋಗ ಗುರುಗಳಾದ ಸುಮಾ ಶೆಟ್ಟಿ ಮತ್ತು ಕಾರ್ತಿಕ್ ಶೆಟ್ಟಿ ಯೋಗ ತರಬೇತಿ ನೀಡಿದರು. ಸುಮಾರು 25 ಮಂದಿ ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದರು. ಕಾರ್ಯಕ್ರಮದಲ್ಲಿ ಮಾತನಾಡಿದ ವೀಣಾ ಶೆಟ್ಟಿಯವರು ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹಾರೈಸಿದರು. ಪ್ರತಿ ದಿನ ಯೋಗ ಮಾಡಿದಲ್ಲಿ ಮಾತ್ರ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಯೋಗದಿಂದ ರೋಗ ದೂರವಾಗುತ್ತದೆ ಎಂದು ಹೇಳಿದರು.

ಮಂಗಳೂರು ಮಹಾನಗರ ಸಂಘ ಚಾಲಕರಾದ ಡಾ. ಸತೀಶ್ ರಾವ್, ಆರೋಗ್ಯ ಭಾರತಿ ದಕ್ಷಿಣ ಕರ್ನಾಟಕ ಪ್ರಾಂತ ಉಪಾಧ್ಯಕ್ಷರೂ ಮಂಗಳೂರು ಜಿಲ್ಲಾ ಗೌರವಾಧ್ಯಕ್ಷರೂ ಆದ ಡಾ. ಮುರಳೀ ಮೋಹನ ಚೂಂತಾರು, ಆರೋಗ್ಯ ಭಾರತಿ ಮಂಗಳೂರು ವಿಭಾಗ ಸಂಚಾಲಕ ಪುರುಷೋತ್ತಮ ದೇವಸ್ಯ, ಆರೋಗ್ಯ ಭಾರತಿ ಮಂಗಳೂರು ಜಿಲ್ಲಾಧ್ಯಕ್ಷ ಡಾ ಈಶ್ವರ ಭಟ್ ಪಳ್ಳಾದೆ, ಜಿಲ್ಲಾ ಕಾರ್ಯದರ್ಶಿ ಉಮೇಶ್ ಪ್ರಭು, ಜೊತೆ ಕಾರ್ಯದರ್ಶಿ ದಿನೇಶ್ ಚಂದ್ರಗಿರಿ, ಸರೋಜಿನಿ ಪ್ರತಿಷ್ಟಾನದ ಡಾ. ರಾಜಶ್ರೀ ಮೋಹನ್, ಗ್ರೀನ್ ಏಕರ್ಸ ಬಡಾವಣೆಯ ರವೀಂದ್ರ, ವಕೀಲರಾದ ಎ. ಯಸ್. ಭಟ್, ವಿಜಯಾ ಭಟ್, ಡಾ. ಆಶಾ, ಮಧುರಾ ಭಟ್, ಅಂಬಿಕಾ ಶೆಟ್ಟಿ, ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ಡಾ. ಸಚಿನ್ ನಡ್ಕ, ಡಾ. ಶಶಾಂಕ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಈಶ್ವರ ಭಟ್ ಪಳ್ಳಾದೆ ಸ್ವಾಗತಿಸಿ. ಡಾ. ಮುರಳೀ ಮೋಹನ ಚೂಂತಾರು ವಂದನಾರ್ಪಣೆಗೈದರು.

ಇದೇ ಸಂದರ್ಭದಲ್ಲಿ ಶ್ರೀಮತಿ ಸುಮಾ ಶೆಟ್ಟಿ ಹಾಗೂ ಕಾರ್ತಿಕ್ ಶೆಟ್ಟಿ ಇವರನ್ನು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಗೌರವಿಸಲಾಯಿತು.

